'ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರಚೋದನೆ ಮಾಡೋದನ್ನ ನಿಲ್ಲಿಸಲಿ '

ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆದ ಮೇಲೆ ಗಡಿ ಗಲಾಟೆ ಶುರು|ರಾಜಕೀಯ ಲಾಭ ಪಡೆಯುವುದಕ್ಕೆ ಶಿವಸೇನೆ ಹೊರಟಿದೆ ಎಂದ ಶೆಟ್ಟರ್|ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೇಕಾದ್ರೆ ಕಾನೂನು ಹೋರಾಟ ಮಾಡಿ| ಈ ತರಹ  ಪ್ರಚೋದನೆ ಮಾಡುವುದು ಸರಿಯಲ್ಲ|

First Published Dec 30, 2019, 2:55 PM IST | Last Updated Dec 30, 2019, 2:55 PM IST

ಬೆಂಗಳೂರು(ಡಿ.30):  ಗಡಿ ವಿಚಾರಕ್ಕೆ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆ ಹೊತ್ತಿ ಉರಿಯುತ್ತಿದೆ. ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆದ ಮೇಲೆ ಗಡಿ ಗಲಾಟೆ ಮತ್ತೆ ಆರಂಭವಾಗಿದೆ. ರಾಜಕೀಯ ಲಾಭ ಪಡೆಯುವುದಕ್ಕೆ ಶಿವಸೇನೆ ಹೊರಟಿದೆ. ಇದು ಸರಿಯಾದ ಕ್ರಮವಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಉದ್ಧವ್ ಠಾಕ್ರೆ ವಿರುದ್ಧ ಹರಿಹಾಯ್ದಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೇಕಾದ್ರೆ ಕಾನೂನು ಹೋರಾಟ ಮಾಡಿ, ಈ ತರಹ  ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಆಕ್ರೊಷ ವ್ಯಕ್ತಪಡಿಸಿದ್ದಾರೆ. 

ಉದ್ಧವ್ ಠಾಕ್ರೆ ಗಡಿ ಭಾಗದಲ್ಲಿರುವ ಮರಾಠಿಗರನ್ನ ಪ್ರಚೋದನೆ ಮಾಡುತ್ತಿದ್ದಾರೆ. ಇದರಿಂದ ಉಭಯ ರಾಜ್ಯಗಳ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪುಂಡಾಟಿಕೆ ನಿಲ್ಲಲಿ ಎಂದು ಹೇಳಿದ್ದಾರೆ.