'ಪಾದರಾಯನಪುರ ನಿಮ್ಮ ಅಪ್ಪನ ಪ್ರಾಪರ್ಟಿಯಾ, ನೀನೇನು ಮಹಮದ್ ಜಿನ್ನಾನಾ?'
ಪಾದರಾಯನಪುರ ಘಟನೆಗೆ ಸಚಿವ ಸಿಟಿ ರವಿ ತೀವ್ರ ಆಕ್ರೋಶ/ ಜಮೀರ್ ಮೇಲೆ ಏಕವಚನದಲ್ಲಿ ದಾಳಿ/ ಪಾದರಾಯನಪುರ ಏನ್ ನಿಮ್ಮ ಅಪ್ಪನ ಪ್ರಾಪರ್ಟಿನಾ? ಅಲ್ಲಿಗೆ ಬರಲು ಪರ್ಮಿಶನ್ ತಗೋಬೇಕಾ?
ಬೆಂಗಳೂರು(ಏ. 22) ಪಾದರಾಯನಪುರ ಏನ್ ನಿಮ್ಮ ಅಪ್ಪನ ಪ್ರಾಪರ್ಟಿನಾ, ಪಾದರಾಯನಪುರಕ್ಕೆ ಪರ್ಮಿಶನ್ ತೆಗೆದುಕೊಂಡು ಹೋಗಲು ನೀನೇನು ಮಹಮದ್ ಅಲಿ ಜಿನ್ನಾನಾ? ಹೀಗೆಂದು ಜಮೀರ್ ಮೇಲೆ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದು ಸಚಿವ ಸಿಟಿ ರವಿ.
ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು
ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ರವಿ, ದೇಶದಲ್ಲಿರುವ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.