ಮೆಟ್ರೋ ಸುರಂಗ ಮಾರ್ಗದಿಂದ ಮನೆಗಳಲ್ಲಿ ಬಿರುಕು..!
ಹಲವು ಮನೆಗಳಿಗೆ ಹಾನಿ| ಶಿವಾಜಿನಗರದಿಂದ ಟ್ಯಾನರಿ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ| ಮನೆಗಳಲ್ಲಿ ಬಿರುಕು ಹಾಗೂ ರಸ್ತೆಗಳಲ್ಲಿ ಗುಂಡಿ|
ಬೆಂಗಳೂರು(ಡಿ.22): ಮೆಟ್ರೋ ಕಾಮಗಾರಿಯಿಂದ ಜನರು ಭಯದಲ್ಲೇ ವಾಸಿಸುವಂತ ಪರಿಸ್ಥಿತಿ ನಿರ್ಮಾಣವಾದ ಘಟನೆ ಶಿವಾಜಿನಗರದಲ್ಲಿ ನಡೆದಿದೆ. ಮೆಟ್ರೋ ಸುರಂಗ ಮಾರ್ಗದಿಂದ ಮನೆಗಳಲ್ಲಿ ಬಿರುಕು ಬಿಡುತ್ತಿವೆ. ಹೀಗಾಗಿ ಇಲ್ಲಿನ ಜನರು ಆತಂಕದಲ್ಲಿದ್ದಾರೆ.
ವಂಚನೆ ಕೇಸ್: ಸೇವಾಲಾಲ್ ಸ್ವಾಮಿ ವಿರುದ್ಧ ಮತ್ತೊಂದು FIR
ಈಗಾಗಲೇ ಹಲವು ಮನೆಗಳಿಗೆ ಹಾನಿಯುಂಟಾಗಿದೆ. ಶಿವಾಜಿನಗರದಿಂದ ಟ್ಯಾನರಿ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದರ ಸುತ್ತ ಮುತ್ತಲಿನ ಮನೆಗಳಲ್ಲಿ ಏಕಾಏಕಿ ಬಿರುಕು ಹಾಗೂ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತಿವೆ. ಕಾಮಗಾರಿ ಸಮರ್ಪಕವಾಗಿ ನಡೆಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.