Asianet Suvarna News Asianet Suvarna News

ಪೊಲೀಸ್ ಬಿಗಿ ಭದ್ರತೆ ನಡುವೆ ಎಂಇಎಸ್‌ನಿಂದ ಹುತಾತ್ಮ ದಿನಾಚರಣೆ!

ಬೆಳಗಾವಿಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಎಂಇಎಸ್‌ ಹುತಾತ್ಮರ ದಿನಾಚರಣೆ ಆಚರಿಸಿತು. ಬೆಳಗಾವಿ ನಗರದ ಹುತಾತ್ಮ ಚೌಕ್ ನಲ್ಲಿ  ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರಿಂದ, ಭಾಷಾ ಗಲಾಟೆಯಲ್ಲಿ ಮೃತಪಟ್ಟ ಎಂಇಎಸ್ ಕಾರ್ಯಕರ್ತರ ನೆನಪಿಗಾಗಿ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ (ಜ.17): ಬೆಳಗಾವಿಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಎಂಇಎಸ್‌ ಹುತಾತ್ಮರ ದಿನಾಚರಣೆ ಆಚರಿಸಿತು. ಬೆಳಗಾವಿ ನಗರದ ಹುತಾತ್ಮ ಚೌಕ್ ನಲ್ಲಿ  ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರಿಂದ, ಭಾಷಾ ಗಲಾಟೆಯಲ್ಲಿ ಮೃತಪಟ್ಟ ಎಂಇಎಸ್ ಕಾರ್ಯಕರ್ತರ ನೆನಪಿಗಾಗಿ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ | ಬೆಳಗಾವಿಗೆ ಎಂಟ್ರಿ ಕೊಟ್ಟ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಬಂಧನ...

ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು, ಬೆಳಗಾವಿಯ ನಾಲ್ಕೂ ದಿಕ್ಕಿನಲ್ಲಿ ಪೊಲೀಸ್ ಸರ್ಪಗಾವಲು ಇತ್ತು. ಎಂಇಎಸ್ ಮತ್ತೆ ಶಾಂತಿ ಕದಡುವ  ಭೀತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಏರಪಡಿಸಲಾಗಿತ್ತು.