ಪೌರತ್ವ ಕಾಯ್ದೆಗೆ ಬೆಂಬಲ: ಕಲಬುರಗಿಯಲ್ಲಿ ಬೃಹತ್ ಮೆರವಣಿಗೆ

ಪೌರತ್ವದ ಪರ ಕಲಬುರಗಿಯಲ್ಲಿ ಬೃಹತ್ ಮೆರವಣಿಗೆ| ಕಲಬುರಗಿ ನಾಗರಿಕ ಸಮಿತಿ ಸಂಘಟನೆಯಿಂದ ಮೆರವಣಿಗೆ ಆಯೋಜನೆ| ಮೆರವಣಿಗೆಯಲ್ಲಿ ಗಮನ ಸೆಳೆದ 2 ಸಾವಿರ ಮೀಟರ್ ಉದ್ದದ ರಾಷ್ಟ್ರ ಧ್ವಜ|

First Published Jan 11, 2020, 1:34 PM IST | Last Updated Jan 11, 2020, 1:38 PM IST

ಕಲಬುರಗಿ(ಜ.11): ಕಲಬುರಗಿ ನಾಗರಿಕ ಸಮಿತಿ ಸಂಘಟನೆಯ ಕಾರ್ಯಕರ್ತರು ಪೌರತ್ವದ ಪರ ನಗರದಲ್ಲಿ ಇಂದು(ಶನಿವಾರ) ಬೃಹತ್ ಮೆರವಣಿಗೆ ನಡೆಸಿದ್ದಾರೆ. ನಗರದ ನಗರೇಶ್ವರ ಶಾಲಾ ಮೈದಾನದಿಂದ ಆರಂಭವಾದ ಈ ಮೆರವಣಿಗೆಯಲ್ಲಿ 2 ಸಾವಿರ ಮೀಟರ್ ಉದ್ದದ ರಾಷ್ಟ್ರ ಧ್ವಜ ಎಲ್ಲರ ಗಮನ ಸೆಳೆಯಿತು. ಬೃಹತ್ ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಇತರ ಕಲಾ ತಂಡಗಳೂ ಸಹ ಭಾಗಿವಹಿಸಿದ್ದವು. 

ಬೃಹತ್ ಮೆರವಣಿಗೆಯಲ್ಲಿ ಹಲವಾರು ಸ್ವಾಮಿಜಿಗಳು ಸೇರಿದಂತೆ 25 ಸಮಾಜಗಳ ಮುಖಂಡರು ಭಾಗವಹಿಸುವ ಮೂಲಕ ಪೌರತ್ವದ ಕಾಯ್ದೆಗೆ ಬೆಂಬಲ ಸೂಚಿಸಿದ್ದಾರೆ. ಮೋದಿ ಮುಂದೆ ಹೋಗಿ, ನಾವು ನಿಮ್ಮ ಜೊತೆಗಿದ್ದೆವೆ ಘೋಷಣೆಯೊಂದಿಗೆ ಮೆರವಣಿಗೆ ಸಾಗಿದೆ. ಬೃಹತ್ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕಲ್ಪಿಸಿದೆ.  
 

Video Top Stories