ಮೆಗಾ ಎಜುಕೇಷನ್‌ ಎಕ್ಸ್‌ ಪೋಗೆ ತೆರೆ : ಸುವರ್ಣ ನ್ಯೂಸ್‌, ಕನ್ನಡಪ್ರಭ ಸಹಯೋಗದ ಸುವರ್ಣ ಶಿಕ್ಷಣ

ಮಲ್ಲೇಶ್ವರಂನ ಆಟದ ಮೈದಾನದಲ್ಲಿ ನಡೆದ ಮೆಗಾ ಎಜುಕೇಷನ್‌ ಎಕ್ಸ್‌ ಪೋಗೆ ಕೊನೆಗೊಂಡಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ.
 

First Published Jun 19, 2023, 9:21 AM IST | Last Updated Jun 19, 2023, 9:21 AM IST

ಬೆಂಗಳೂರು: ಎಲ್ಲಾ ಕಾಲೇಜುಗಳ ಶೈಕ್ಷಣಿಕ ಮಾಹಿತಿ ಒಂದೇ ಸೂರಿನಡಿ ಸಿಗುವ ಉದ್ದೇಶದಿಂದ ಕನ್ನಡ ಪ್ರಭಾ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಅರ್ಪಿಸುವ ಎ ಮೆಗಾ ಎಜುಕೇಷನ್‌ ಎಕ್ಸ್‌ ಪೋ ಸೀಜನ್‌-3ಗೆ ತೆರೆ ಬಿದ್ದಿದೆ. ಮಲ್ಲೇಶ್ವರಂನ ಆಟದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಇದಕ್ಕೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ಚಾಲನೆ ನೀಡಿದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ವಿದ್ಯಾರ್ಥಿಗಳು ಯಾವ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು. ಯಾವ ಯಾವ ಕಾಲೇಜುಗಳು ಇವೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಯಿತು. ಇಲ್ಲಿ ಶೈಕ್ಷಣಿಕ ವಿಷಯದ ಎಲ್ಲಾ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಈ ಕಾರ್ಯಕ್ರಮಕ್ಕೆ ನಟಿ ಹರಿಪ್ರಿಯಾ, ಶಾಸಕ ಪ್ರದೀಪ್‌ ಈಶ್ವರ್‌ ಚಂದ್ರ ಬಂದಿದ್ದರು. 

ಇದನ್ನೂ ವೀಕ್ಷಿಸಿ: ಛಬ್ಬಿಯಲ್ಲಿ ಬೃಹತ್‌ ಹೈಸ್ಕೂಲ್‌ ಕಟ್ಟಡ ನಿರ್ಮಾಣ: ಭೂಮಿ ಪೂಜೆ ನೆರವೇರಿಸಿದ ಬೊಮ್ಮಾಯಿ, ನಟ ರಿಷಬ್‌ ಶೆಟ್ಟಿ