Big 3 Hero: ಸಾಮೂಹಿಕ ನೇತ್ರದಾನ: ಮಾದರಿಯಾದ ದಾವಣಗೆರೆಯ ಚಟ್ಟೋಬನಹಳ್ಳಿ ಜನತೆ

ದಾವಣಗೆರೆ ಜಿಲ್ಲೆಯ ಚಟ್ಟೋಬನಹಳ್ಳಿ ಗ್ರಾಮ ಜನರು, ಸಾಮೂಹಿಕವಾಗಿ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

First Published Nov 26, 2022, 12:41 PM IST | Last Updated Nov 26, 2022, 12:42 PM IST

ಪುನೀತ್ ಸಾವಿನ ನಂತರ ಅವರ ನೇತ್ರದಾನದಿಂದ ಪ್ರೇರಣೆಯಾದ ಚಟ್ಟೋಬನಹಳ್ಳಿ ಗ್ರಾಮಸ್ಥರು, ತಾವು ಏಕೆ ನೇತ್ರದಾನ ಮಾಡಬಾರದು ಎಂದು ನಿರ್ಧರಿಸಿ ಸ್ವಯಂಪ್ರೇರಿತರಾಗಿ ನೇತ್ರದಾನ ಮಾಡಿದ್ದಾರೆ. ಗ್ರಾಮದಲ್ಲಿ ನೇತ್ರದಾನದ ಕ್ಯಾಂಪ್ ಮಾಡಿ 100ಕ್ಕೂ ಹೆಚ್ಚು ನೇತ್ರದಾನದ ಅರ್ಜಿ ಭರ್ತಿಮಾಡಿ, ಸಾಮೂಹಿಕ ನೇತ್ರದಾನದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಈ ಸೇವಾ ಕಾರ್ಯಕ್ಕೆ ಪ್ರೇರಣೆ ಆಗಿದ್ದು ಕರ್ನಾಟಕ ರತ್ನ ದಿ ಡಾ. ಪುನೀತ್ ರಾಜ್ ಕುಮಾರ್. ಚಟ್ಟೋಬನಹಳ್ಳಿ  ಗ್ರಾಮದಲ್ಲಿ 120 ಕುಟುಂಬಗಳು ವಾಸವಿದ್ದು, 800ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಈ ಪೈಕಿ 18ವರ್ಷ ಮೇಲ್ಪಟ್ಟವರ ಸಂಖ್ಯೆ 500ಕ್ಕೂ ಅಧಿಕವಾಗಿದೆ. ಚಟ್ಟೋಬನಹಳ್ಳಿ ಶೇ.95ರಷ್ಟು ಶೈಕ್ಷಣಿಕತೆಯನ್ನು ಒಳಗೊಂಡಿರುವ ಗ್ರಾಮವಾಗಿದೆ. ಅದರಲ್ಲೂ 18ರಿಂದ 40ವರ್ಷದೊಳಗಿನ ಜನಸಂಖ್ಯೆ ವಲಯದಲ್ಲಿ ಶೇ.100 ರಷ್ಟು ಸಾಕ್ಷರತೆ ಇದೆ. ಈ ಎಲ್ಲಾ ವಯಸ್ಕರು ಮರಣಾ ನಂತರ ತಮ್ಮ ಕಣ್ಣುಗಳನ್ನು ದಾನ ನೀಡುವ ವಾಗ್ದಾನ ಮಾಡಿದ್ದಾರೆ. 

Amazon Layoffs: ಯಾರನ್ನೂ ತೆಗೆದಿಲ್ಲ, ಅವರೇ ರಾಜೀನಾಮೆ ಕೊಟ್ಟಿದ್ದಾರೆ: ಕಾರ್ಮಿಕ ಇಲಾಖೆಗೆ ಅಮೆಜಾನ್‌ ಸ್ಪಷ್ಟನೆ