Asianet Suvarna News Asianet Suvarna News

ಮುಡಿಪುವಿನ ಸುಂದರ ಪರಿಸರದಲ್ಲಿ ಭವ್ಯವಾಗಿ ವಿರಾಜಮಾನವಾಗಿದೆ ಶ್ರೀಕೃಷ್ಣ ಧ್ಯಾನ ಮಂದಿರ

Sep 11, 2021, 9:07 AM IST

ಮಂಗಳೂರು (ಸೆ. 11): ಸುತ್ತಲೂ ಕಣ್ಣು ಹಾಯಿಸಿದಷ್ಡು ದೂರವೂ ಹಸಿರ ರಾಶಿ, ದೂರದಲ್ಲಿ ಸಮುದ್ರಕ್ಕೆ ಮುತ್ತಿಕ್ಕಿರೋ ಆಗಸ, ಈ ಹಸಿರ ರಾಶಿ ಮಧ್ಯೆ ಎತ್ತರದ ಗುಡ್ಡದಲ್ಲಿ ಭವ್ಯವಾಗಿ ವಿರಾಜಮಾನವಾಗಿರೋ ಮಂದಿರ, ಒಮ್ಮೆಗೆ ನೋಡಿದ್ರೆ ಪುರಿ ಜಗನ್ನಾಥ ಮಂದಿರವನ್ನ ಹೋಲುವಂತಹ ವಾಸ್ತು ಶೈಲಿ.

ರೇಷನ್ ಕಾರ್ಡ್ ತವರಲ್ಲಿ, ಕೆಲಸ ಉಡುಪಿಯಲ್ಲಿ: 'ಥಂಬ್' ಕೊಡಲಾಗದೇ ಕಾರ್ಮಿಕರ ಗೋಳು!

ಇಂತಹ ಒಂದು ಭವ್ಯ ಮಂದಿರ ನಿರ್ಮಾಣವಾಗಿರೋದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮುಡಿಪು ಗ್ರಾಮದಲ್ಲಿ. ಇದು ಶ್ರೀಕೃಷ್ಣ ಧ್ಯಾನ ಮಂದಿರ. ಸುಂದರ ಪರಿಸರದ ಮಧ್ಯೆ ಈ ಧ್ಯಾನ ಮಂದಿರ ನಿರ್ಮಾಣ ಮಾಡಲಾಗಿದ್ದು, ಯಾರು ಬೇಕಾದ್ರೂ ಬಂದು ಈ ಧ್ಯಾನ ಮಂದಿರದ ಒಳಗೆ ಕುಳಿತು ಧ್ಯಾನ ಮಾಡಬಹುದು. ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಮದನ್  ಮೋಹನ್ ನಾಯ್ಕ್​ ಅವರ ಕನಸಿನ ಕೂಸಿದು.