Asianet Suvarna News Asianet Suvarna News

ಮಂಗಳೂರು ಖಾಸಗಿ ಆಸ್ಪತ್ರೆಯ ಬೇಜವಾಬ್ದಾರಿತನ ಬಯಲು..!

ಕೊರೋನಾ ಸೋಂಕು ಇಲ್ಲದೇ ಇದ್ದರೂ 20 ಕುಟುಂಬದ 100 ಜನ ಕ್ವಾರಂಟೈನ್ ಶಿಕ್ಷೆ ಅನುಭವಿಸುವಂತಾಗಿದೆ. ಎದೆನೋವು ಅಂತ ಹೋದ್ರು ಕೊರೋನಾ ಪಾಸಿಟಿವ್ ಅಂದ್ರು. ಇದು ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಎಲೆಕ್ಟ್ರಾನಿಕ್ ಉದ್ಯಮಿಗೆ ಶಾಕ್ ನೀಡಿದೆ ಖಾಸಗಿ ಆಸ್ಪತ್ರೆ.

ಮಂಗಳೂರು(ಜು.27): ಕೊರೋನಾ ಅವಾಂತರದ ನಡುವೆಯೇ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ಬೇಜವ್ದಾರಿತನ ಬಯಲಾಗಿದೆ. ಇಲ್ಲಿನ ಯನಪೋಯ ಆಸ್ಪತ್ರೆಯ ಅವಾಂತರಕ್ಕೆ 20 ಕುಟುಂಬಗಳು ಸಂಕಷ್ಟ ಎದುರಾಗಿದೆ.

ಹೌದು, ಕೊರೋನಾ ಸೋಂಕು ಇಲ್ಲದೇ ಇದ್ದರೂ 20 ಕುಟುಂಬದ 100 ಜನ ಕ್ವಾರಂಟೈನ್ ಶಿಕ್ಷೆ ಅನುಭವಿಸುವಂತಾಗಿದೆ. ಎದೆನೋವು ಅಂತ ಹೋದ್ರು ಕೊರೋನಾ ಪಾಸಿಟಿವ್ ಅಂದ್ರು. ಇದು ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಎಲೆಕ್ಟ್ರಾನಿಕ್ ಉದ್ಯಮಿಗೆ ಶಾಕ್ ನೀಡಿದೆ ಖಾಸಗಿ ಆಸ್ಪತ್ರೆ.

ಬೆಳಗಾವಿ ICMR ಟೆಸ್ಟಿಂಗ್‌ ಲ್ಯಾಬ್‌ನಲ್ಲಿ ಮಹಾ ಯಡವಟ್ಟು..!

ಜುಲೈ 21ಕ್ಕೆ ಯನಪೋಯ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಅವರ ಸಂಪರ್ಕದಲ್ಲಿದ್ದ ನೂರಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ  ಜುಲೈ 25ಕ್ಕೆ ಕೆಎಂಸಿ ಆಸ್ಪತ್ರೆ ಲ್ಯಾಬ್ ರಿಪೋರ್ಟ್‌ನಲ್ಲಿ ನೆಗೆಟಿವ್ ಬಂದಿದೆ. ಖಾಸಗಿ ಆಸ್ಪತ್ರೆ ಯಡವಟ್ಟಿಗೆ ನೂರಾರು ಮಂದಿ ಶಿಕ್ಷೆ ಅನುಭವಿಸುವಂತಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.