Mangaluru Blast Case: ಮಹಾದುರಂತ ತಪ್ಪಿಸಿದ್ದು ಗರೋಡಿ ಕ್ಷೇತ್ರದ ತುಳುನಾಡಿನ ಮಹಾಪುರುಷರು!
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ನಂತರ ದೈವ ಪವಾಡದ ಸುದ್ದಿ ಕರಾವಳಿಯಲ್ಲಿ ವ್ಯಾಪಕ ಚರ್ಚೆಯಾಗ್ತಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಸಿದ್ಧ ಗರೋಡಿ ಕ್ಷೇತ್ರದ 200 ಮೀಟರ್ ದೂರದಲ್ಲಿ ನಡೆದಿತ್ತು. ಈ ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳುತ್ತಿದ್ದಾರೆ.
ಮಂಗಳೂರು (ನ.22): ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ನಂತರ ದೈವ ಪವಾಡದ ಸುದ್ದಿ ಕರಾವಳಿಯಲ್ಲಿ ವ್ಯಾಪಕ ಚರ್ಚೆಯಾಗ್ತಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಸಿದ್ಧ ಗರೋಡಿ ಕ್ಷೇತ್ರದ 200 ಮೀಟರ್ ದೂರದಲ್ಲಿ ನಡೆದಿತ್ತು. ಈ ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳುತ್ತಿದ್ದಾರೆ. ಮಂಗಳೂರಿನ ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ಕೋಟಿ-ಚೆನ್ನಯ್ಯ ಅವಳಿ ಮಹಾಪುರುಷ ಶಕ್ತಿಗಳು ನೆಲೆಯೂರಿದ್ದಾರೆ.
Mangaluru Bomb Blast:ಅಧರ್ಮದಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ
ನವೆಂಬರ್ 19ರಂದು ನಡೆದ ಬಾಂಬ್ ಸ್ಫೋಟ ದೊಡ್ಡ ಮಟ್ಟದಲ್ಲಿ ನಡೆಯದಂತೆ ಅನಾಹುತ ತಪ್ಪಿಸಿದ್ದು ಇದೇ ಶಕ್ತಿಗಳು ಎಂದು ಹೇಳಲಾಗುತ್ತಿದೆ. ಮಾನವ ಬಲವೊಂದಿದ್ದರೆ ಸಾಲದು ದೈವಬಲವೂ ಬೇಕು ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಬ್ರಹ್ಮಬೈದರ್ಕಳ ಕ್ಷೇತ್ರಕ್ಕೆ ಬಂದು ಆಟೋ ಚಾಲಕ ಪುರುಷೋತ್ತಮ್ ಕೈ ಮುಗಿಯುತ್ತಿದ್ದರು. ಪ್ರತೀ ಆಟೋ ಚಾಲಕರು ಈ ಕ್ಷೇತ್ರದಲ್ಲಿ ಕೈಮುಗಿದು ದಿನ ಆರಂಭ ಮಾಡುತ್ತಿದ್ದರು. ಹೀಗಾಗಿ ಈ ಶಕ್ತಿಯೇ ದೊಡ್ಡ ಅನಾಹುತ ತಪ್ಪಿಸಿದೆ ಅನ್ನೋದು ಭಕ್ತರ ನಂಬಿಕೆ.