Asianet Suvarna News Asianet Suvarna News

ಆದಿತ್ಯ ರಾವ್ ಕೆಲಸಕ್ಕಿದ್ದ ಹೋಟೆಲ್ ಸಿಬ್ಬಂದಿ ಬಾಂಬರ್ ಬಗ್ಗೆ ಹೇಳಿದ್ದೇನು..?

Jan 23, 2020, 3:17 PM IST

ಮಂಗಳೂರು(ಜ.23): ಆದಿತ್ಯರಾವ್‌ ಮಂಗಳೂರಿನಲ್ಲಿ ಕುಡ್ಲ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಮಾಮೂಲಿಯಾಗಿ ತನ್ನ ಬಯೋಡೇಟಾ ಕೊಟ್ಟು ಕೆಲಸಕ್ಕೆ ಸೇರಿಕೊಂಡಿದ್ದ. ಆತನ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ಡಿಸೆಂಬರ್‌ 16ಕ್ಕೆ ಆದಿತ್ಯ ರಾವ್ ಮಂಗಳೂರಿನ ಕುಡ್ಲ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆತನಿಗೆ ಬಿಲ್ಲಿಂಗ್ ಸೆಕ್ಷನ್‌ನಲ್ಲಿ ಕೆಲಸ ಕೊಡಲಾಗಿತ್ತು. ದಿನವೂ ಆತ ಒಂದು ಬ್ಯಾಗ್ ಇಟ್ಟುಕೊಳ್ಳುತ್ತಿದ್ದ. ಅದನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.

ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಆದಿತ್ಯ, ಟೆಕ್ನಿಕಲಿ ಎಕ್ಸ್‌ಪರ್ಟ್

ಅಮೆಜಾನ್‌ನಲ್ಲಿ ವೈಟ್‌ ಸಿಮೆಂಟ್‌ ಆರ್ಡರ್ ಮಾಡಿಕೊಳ್ಳುತ್ತಿದ್ದ. ಹೋಟೆಲ್ ಆತನಿಗೆ ಉಳಿದುಕೊಳ್ಳಲು ಒಂದು ಜಾಗವಾಗಿತ್ತು. ಬಯೋಡೇಟಾದಲ್ಲಿ ಧನಾತ್ಮಕವಾದ ಮನಸ್ಸು ಮತ್ತು ಸಾಧನೆಯ ಪ್ರಜ್ಞೆ ಉತ್ತಮ ಫಲಿತಾಂಶದತ್ತ ಕೊಂಡೊಯ್ಯುತ್ತದೆ ಎಂದು ಉಲ್ಲೇಖ ಮಾಡಿದ್ದ. ತನ್ನ ಕ್ವಾಲಿಫಿಕೇಷನ್ ಪಿಯುಸಿ ಎಂದು ನಮೂದಿಸಿದ್ದ. ಡಬಲ್ ಡಿಗ್ರಿ ಪದವೀಧರನಾಗಿದ್ದರೂ ಬಯೋಡೇಟಾದಲ್ಲಿ ಪಿಯುಸಿ ಎಂದು ಉಲ್ಲೇಖ ಮಾಡಿದ್ದ.

ಬಾಂಬ್ ಇಟ್ಟಿದ್ದಕ್ಕೆ ಕಾರಣ ಕೊಟ್ಟ ಆದಿತ್ಯ ರಾವ್, ಉತ್ತರಕ್ಕೆ ಪೊಲೀಸರೇ ಶಾಕ್‌