Male Mahadeshwara Hill: ಮಹದೇಶ್ವರನ ಆದಾಯದ ಮೇಲೆ ಬಿತ್ತು ಸರ್ಕಾರದ ಕಣ್ಣು: ಭಕ್ತರ ಆಕ್ರೋಶ
* ಮಹದೇಶ್ವರ ಭಕ್ತರಿಂದ ಸರ್ಕಾರದ ನಡೆಗೆ ವಿರೋಧ
* ಸಾಮಾಜಿಕ ಜಾಲತಾಣಗಳಲ್ಲಿ ದತ್ತು ವಿಚಾರವಾಗಿ ಭಕ್ತರ ಆಕ್ರೋಶ
* ಮಹದೇಶ್ವರ ಬೆಟ್ಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಆಗ್ರಹ
ಚಾಮರಾಜನಗರ(ಡಿ.30): ಮಲೈಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಿಂದ ರಾಜ್ಯದ ಕಡಿಮೆ ಆದಾಯದ ದೇವಾಲಯ ದತ್ತು ತೆಗೆದುಕೊಳ್ಳುವ ವಿಚಾರವಾಗಿ ಮಹದೇಶ್ವರ ಭಕ್ತರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕಡಿಮೆ ಆದಾಯದ ದೇವಾಲಯಗಳನ್ನು ದತ್ತು ತೆಗೆದುಕೊಳ್ಳಲು ಸಚಿವೆ ಶಶಿಕಲಾ ಜೊಲ್ಲೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಶುಕ್ರವಾರ ಬೆಳಗಾವಿಯಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ಅಸಮಾಧಾನ ವ್ಯಕ್ತವಾಗಿದ್ದು, ಪ್ರಾಧಿಕಾರದ ದುಡ್ಡು ತೆಗೆದುಕೊಂಡು ಹೋಗಿ ಕೊಳ್ಳೆ ಹೊಡೆಯುವ ಪ್ಲಾನ್ ಎಂಬ ಆರೋಪ ಕೇಳಿಬಂದಿದೆ.
Karnataka Bandh: ನೈಟ್ ಕರ್ಫ್ಯೂಗೆ ಆಕ್ರೋಶ: ಕರ್ನಾಟಕ ಬಂದ್‌ಗೆ ವಿರೊಧ: ಡಿ. 31ರ ಕಥೆ ಏನು?
ಸಚಿವೆ ಶಶಿಕಲಾ ಜೊಲ್ಲೆಗೆ ಮಾಡೋಕೆ ಬೇರೆ ಕೆಲ್ಸ ಇಲ್ಲ, ಬೇಕಿದ್ರೆ ಅವ್ರ ದುಡ್ಡಲ್ಲಿ ದತ್ತು ತಗೊಳ್ಳಲಿ, ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಸಾಕಷ್ಟು ಕುಗ್ರಾಮಗಳಿದ್ದು, ಸಮಸ್ಯೆಗಳನ್ನೇ ಹಾಸಿ ಹೊದ್ದು ಮಲಗಿವೆ. ಮಹದೇಶ್ವರ ಬೆಟ್ಟದ ರಸ್ತೆಯೇ ತೀರಾ ಹದಗೆಟ್ಟಿದೆ, ಸಾಕಷ್ಟು ಶೌಚಾಲಯಗಳಿಲ್ಲ, ವಸತಿಗೃಹಗಳಿಲ್ಲ, ರೋಗಿಗಳನ್ನು ಜೋಲಿ ಕಟ್ಟಿ ಹೊತ್ತುಕೊಂಡು ಬರಬೇಕಾದ ಸ್ಥಿತಿ ಇದೆ, ಶಿಕ್ಷಣ, ಆರೋಗ್ಯ, ರಸ್ತೆ, ಸೌಲಭ್ಯಗಳಿಲ್ಲದೆ ಜನ ಪರಿತಪಿಸುತ್ತಿದ್ದಾರೆ, ಮೊದಲು ಮಹದೇಶ್ವರ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.