Asianet Suvarna News Asianet Suvarna News

ಕೊರೋನಾ ಭೀತಿ: ಹೆಲ್ಮೆಟ್ ಧರಿಸಿದ KSRTC ಡ್ರೈವರ್

ಕೊರೊನಾ ಬೀತಿ ಹಿನ್ನೆಲೆಯಲ್ಲಿ ಬಸ್ ಚಾಲಕ ಹೆಲ್ಮೆಟ್ ಧರಿಸಿ ಬಸ್‌ ಡ್ರೈವ್‌ ಮಾಡಿದ್ದಾನೆ. ಕೆ.ಎಸ್.ಆರ್.ಟಿಸಿ ಬಸ್ ಚಾಲಕ ಕುಶ ಕುಮಾರ್‌ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದು ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ್ದಾರೆ.

 

ಮಡಿಕೇರಿ(ಮಾ.14): ಕೊರೊನಾ ಬೀತಿ ಹಿನ್ನೆಲೆಯಲ್ಲಿ ಬಸ್ ಚಾಲಕ ಹೆಲ್ಮೆಟ್ ಧರಿಸಿ ಬಸ್‌ ಡ್ರೈವ್‌ ಮಾಡಿದ್ದಾನೆ. ಕೆ.ಎಸ್.ಆರ್.ಟಿಸಿ ಬಸ್ ಚಾಲಕ ಕುಶ ಕುಮಾರ್‌ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದು ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ್ದಾರೆ.

ಕೊರೋನಾ ಕಾಟ: ಸರ್ಕಾರಿ ಬಸ್‌ನಲ್ಲಿ ಫ್ರಿ ಮಾಸ್ಕ್‌!

ಮಾಸ್ಕ್ ಸಿಗದ್ದರಿಂದ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ್ದು, ಮಡಿಕೇರಿ-ಕುಶಾಲನಗರ ಮಾರ್ಗದಲ್ಲಿ ಸಂಚರಿಸುವ ಬಸ್ ಚಾಲಕ ಈ ಪ್ಲಾನ್ ಮಾಡಿದ್ದಾರೆ. ಜನ ಮಾರಕ ಕಾಯಿಲೆ ವಿರುದ್ಧ ಜಾಗ್ರತೆ ವಹಿಸಬೇಕು ಎಂದಿದ್ದಾರೆ.

ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹೀಗಾಗಿ ಹೆಲ್ಮೆಟ್ ಧರಿಸಿದ್ದೇನೆ ಎಂದು ಮಡಿಕೇರಿ ವಿಭಾಗದ ಬಸ್ ಚಾಲಕ ಕುಶ ಕುಮಾರ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.