Asianet Suvarna News Asianet Suvarna News

ಮುರುಘಾ ಶ್ರೀಗಳಿಂದ ಲೈಂಗಿಕ ದೌರ್ಜನ್ಯ ಆರೋಪ: ಮಠದ ಕಾನೂನು ಸಲಹೆಗಾರ ವಿಶ್ವನಾಥಯ್ಯ ಪ್ರತಿಕ್ರಿಯೆ

Murugha Math News: ಮಠದ ವಿರೋಧಿ ಶಕ್ತಿಗಳಿಂದ ಮುರುಘಾಶ್ರೀ ವಿರುದ್ಧ ದೂರು ನೀಡಲಾಗಿದೆ ಎಂದು ಮುರುಘಾಮಠ ಮಠದ ಕಾನೂನು ಸಲಹೆಗಾರ ವಿಶ್ವನಾಥಯ್ಯ ಹೇಳಿದ್ದಾರೆ 

First Published Aug 27, 2022, 3:30 PM IST | Last Updated Aug 27, 2022, 3:31 PM IST

ಚಿತ್ರದುರ್ಗ (ಆ. 27): ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ರಾಜ್ಯದ ಪ್ರತಿಷ್ಠಿತ ಮಠವೊಂದರಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ  ಮುರುಘಾಮಠ ಮಠದ ಕಾನೂನು ಸಲಹೆಗಾರ ವಿಶ್ವನಾಥಯ್ಯ, ಮಠದ ವಿರೋಧಿ ಶಕ್ತಿಗಳಿಂದ ಮುರುಘಾಶ್ರೀ ವಿರುದ್ಧ ದೂರು ನೀಡಲಾಗಿದೆ ಎಂದಿದ್ದಾರೆ. 

ಮಾಧ್ಯಮದ ಮೂಲಕ ದೂರು ದಾಖಲಾಗಿದ್ದು ತಿಳಿದಿದೆ ಎಂದಿರುವ ಅವರು "ಸದ್ಯ ಮುರುಘಾಶ್ರೀಗಳು ಮಾಧ್ಯಮಕ್ಕೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಇಲ್ಲ, ಮುರುಘಾ ಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ,  ಬಾಲಕಿಯರ ತಲೆಕೆಡಿಸಿ ಮುರುಘಾಶ್ರೀ ವಿರುದ್ಧ ದೂರು ನೀಡಲಾಗಿದೆ, ಬಾಲಕಿಯರ ದುರುಪಯೋಗ ಪಡಿಸಿಕೊಂಡು ನೀಡಲಾಗಿದೆ, ಈ ಬಗ್ಗೆ ಮುರುಘಾಶ್ರೀಗಳು ನಮ್ಮ ಬಳಿ ಹೇಳಿದ್ದಾರೆ, ಪ್ರಕರಣದ ಬಗ್ಗೆ ಕಾನೂನು ಹೋರಾಟ ಮಾಡಲಾಗುವುದು, ಸುಳ್ಳು ದೂರು ನೀಡಿದವರು ಕೇಸ್ ವಾಪಸ್ ಪಡೆಯಲಿ" ಎಂದು ಹೇಳಿದ್ದಾರೆ

Muruga Matha: ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಿದ್ಯಾರ್ಥಿನಿಯರ ವೈದ್ಯಕೀಯ ಪರೀಕ್ಷೆ

Video Top Stories