ಭೂಕುಸಿತದಿಂದ ಕಂಗೆಟ್ಟ ಕಾಫಿನಾಡಿನ ಜನ: ಭಯದಲ್ಲಿ ಬದುಕು ಕಳೆಯುವ ಸ್ಥಿತಿ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ನಿಂತರು ಮಳೆ ಹಾನಿ ನಿಂತಿಲ್ಲ ಎಂಬಂತೆ ಮಳೆ ನಿಂತರು ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಲೇ ಇವೆ.

First Published Aug 17, 2022, 4:11 PM IST | Last Updated Aug 17, 2022, 4:11 PM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ನಿಂತರು ಮಳೆ ಹಾನಿ ನಿಂತಿಲ್ಲ ಎಂಬಂತೆ ಮಳೆ ನಿಂತರು ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಲೇ ಇವೆ. ಚಿಕ್ಕಮಗಳೂರಿನ ಮಾಗರಹಳ್ಳಿಯಲ್ಲಿ ಭೂಕುಸಿತದಿಂದಾಗಿ ಮನೆ ಮುಂದಿನ ತೋಟವಿದ್ದ ಜಾಗದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಭೂ ಕುಸಿತದಿಂದಾಗಿ ತೋಟದಲ್ಲಿ 30 ಅಡಿಯ ಕಂದಕ ನಿರ್ಮಾಣವಾಗಿದ್ದು, ಕಾಫಿ ಅಡಿಕೆ, ಕಾಳು ಮೆಣಸು ಬೆಳೆಗಳು ಮಣ್ಣು ಪಾಲಾಗಿವೆ. ತೋಟದ ತುಂಬು ಮಣ್ಣು ನಿಂತಿದೆ. ಮನೆ ಮುಂದಿನ ಧರೆಯೇ ಕುಸಿದಿರುವುದರಿಂದ ಮನೆ ಯಾವಾಗ ಕುಸಿದು ಬೀಳುವುದೋ ಎಂಬ ಆತಂಕದಲ್ಲಿ ಮನೆ ಮಂದಿ ಇದ್ದಾರೆ. ಲೋಕೇಶ್ ಎಂಬುವವರು ತೋಟ ಕುಸಿದಿದ್ದು ಮುಂದೆ ಮನೆಯೂ ಯಾವುದೇ ಕ್ಷಣದಲ್ಲಾದರೂ ಕುಸಿಯುವಂತಹ ಆತಂಕ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ತಮಗೆ ಪರಿಹಾರ ನೀಡಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.