ಹುಬ್ಬಳ್ಳಿಯಲ್ಲಿ ಸರ್ಕಾರಿ ಭೂಮಿ ಕಬಳಿಸಿದ್ರೂ ಅಧಿಕಾರಿಗಳು ಮೌನ....!

ಹುಬ್ಬಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ‌ ಬಾಳುವ ಪಾಲಿಕೆಯ ಭೂಮಿಯನ್ನು ಕಬಳಿಸಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. 

First Published Nov 30, 2022, 3:23 PM IST | Last Updated Nov 30, 2022, 3:23 PM IST

ಹುಬ್ಬಳ್ಳಿಯ ವಿದ್ಯಾ ನಗರದ ಪ್ರಗತಿ ಕಾಲೋನಿಯನ್ನು 1961ರಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ನಿವೇಶನಗಳನ್ನು ಹೊರತುಪಡಿಸಿ ಉಳಿದ 31 ಗುಂಟೆ ಜಾಗವನ್ನು ಪಾಲಿಕೆ‌ ತನ್ನ ಆಸ್ತಿ ಎಂದು ಘೋಷಿಸಿತ್ತು. ಅಷ್ಟೇ ಅಲ್ಲ ಸರ್ಕಾರಿ ದಾಖಲೆಗಳ ಪ್ರಕಾರ ಇದು ಫರ್ಮನೆಂಟ್ ಗ್ರೀನ್ ಬೆಲ್ಟ್ ಜಾಗ ಎಂದು ಗುರುತಿಸಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಈ ಜಾಗ ಪಾಲಿಕೆ‌ ಒಡೆತನದಲ್ಲಿದೆ. ಆದರೆ ಈ ಜಾಗದ ಮೇಲೆ ಕಣ್ಣು ಹಾಕಿರುವ ಕೆಲ‌ ಭೂ ಮಾಫಿಯಾ ದುರುಳರು ರಾತ್ರೋರಾತ್ರಿ ಕಬಳಿಸಲು ಮುಂದಾಗಿದ್ದು, 31 ಗುಂಟೆ ಜಾಗದ ಸುತ್ತಲು ತಡೆಗೋಡೆ ನಿರ್ಮಿಸಿ‌ ಕಬಳಿಸುವ ಹುನ್ನಾರ ನಡೆಸಿರೋದು ಬಡಾವಣೆ ನಿವಾಸಿಗಳನ್ನು ಕೆರಳುವಂತೆ ಮಾಡಿದೆ.

Video Top Stories