Asianet Suvarna News Asianet Suvarna News

30 ಅಡಿ ಬಾವಿಗೆ ಇಳಿದು ಶ್ವಾನ ರಕ್ಷಿಸಿದ ಧೀರೆ!

ಮಂಗಳೂರು ನಗರದ ಬಲ್ಲಾಳ್‌ಬಾಗ್‌ ಮೈದಾನವೊಂದರ ಬಳಿಯ 30 ಅಡಿ ಬಾವಿಗೆ ಶ್ವಾನವೊಂದು ಬಿದ್ದಿದ್ದು, ಮಹಿಳೆಯೊಬ್ಬರು ಬಾವಿಗಿಳಿದು ಶ್ವಾನವನ್ನು ರಕ್ಷಿಸಿ ಸಾಹಸ ಮೆರೆದ ಘಟನೆ ಗುರುವಾರ ನಡೆದಿದೆ. ಮಹಿಳೆಯ ಸಾಹಸದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಲ್ಲಾಳ್‌ಬಾಗ್‌ ನಿವಾಸಿ ರಜನಿ ದಾಮೋದರ್‌ ಶೆಟ್ಟಿಎಂಬವರೇ ಈ ಸಾಹಸ ಮಾಡಿದ ಧೀರೆ.

ಮಂಗಳೂರು(ಫೆ.01): ನಗರದ ಬಲ್ಲಾಳ್‌ಬಾಗ್‌ ಮೈದಾನವೊಂದರ ಬಳಿಯ 30 ಅಡಿ ಬಾವಿಗೆ ಶ್ವಾನವೊಂದು ಬಿದ್ದಿದ್ದು, ಮಹಿಳೆಯೊಬ್ಬರು ಬಾವಿಗಿಳಿದು ಶ್ವಾನವನ್ನು ರಕ್ಷಿಸಿ ಸಾಹಸ ಮೆರೆದ ಘಟನೆ ಗುರುವಾರ ನಡೆದಿದೆ. ಮಹಿಳೆಯ ಸಾಹಸದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಲ್ಲಾಳ್‌ಬಾಗ್‌ ನಿವಾಸಿ ರಜನಿ ದಾಮೋದರ್‌ ಶೆಟ್ಟಿಎಂಬವರೇ ಈ ಸಾಹಸ ಮಾಡಿದ ಧೀರೆ.

ಬಲ್ಲಾಳ್‌ಬಾಗ್‌ ಮೈದಾನವೊಂದರ ಬಳಿ ಬುಧವಾರ ರಾತ್ರಿ ಶ್ವಾನಗಳು ಪರಸ್ಪರ ಕಚ್ಚಾಡುತ್ತಿದ್ದಾಗ, ಒಂದು ಶ್ವಾನ 30 ಅಡಿ ಆಳದ ಬಾವಿಗೆ ಬಿದ್ದಿತ್ತು. ಈ ವಿಷಯ ಗುರುವಾರ ಮೈದಾನಕ್ಕೆ ಕ್ರಿಕೆಟ್‌ ಆಡಲು ಬಂದವರ ಗಮನಕ್ಕೆ ಬಂದಿದ್ದು, ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಬಾವಿಯ ಸುತ್ತಮುತ್ತ ಜನರು ಜಮಾಯಿಸಿ ಶ್ವಾನವನ್ನು ಮೇಲೆತ್ತಲು ಪ್ರಯತ್ನ ಪ್ರಾರಂಭಿಸಿದರು. ಹಗ್ಗ, ಟಯರ್‌ಗಳನ್ನು ಬಳಸಿ ಮೇಲೆತ್ತುವ ಪ್ರಯತ್ನ ಮಾಡಲಾಗಿದ್ದು, ಒಂದು ಹಂತದಲ್ಲಿ ಶ್ವಾನ ಸ್ವಲ್ಪ ಮೇಲೆ ಬಂತಾದರೂ, ಆಯತಪ್ಪಿ ಮತ್ತೆ ನೀರಿಗೆ ಬಿದ್ದಿತ್ತು. ಸುಮಾರು ಮೂರು ಗಂಟೆ ಕಾರ್ಯಾಚರಣೆ ಬಳಿಕವೂ ಶ್ವಾನವನ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ.

ಮಂಡ್ಯ ಹೈದ ಅಭಿಷೇಕ್‌ಗೆ ಸಾಥ್ ಕೊಟ್ಟ ಚಾಲೆಂಜಿಂಗ್ ಸ್ಟಾರ್

ಆಗ ಸ್ಥಳೀಯರಿಗೆ ಪ್ರಾಣಿ ಪ್ರಿಯೆ ರಜನಿ ದಾಮೋದರ್‌ ಶೆಟ್ಟಿಯವರ ನೆನಪಾಗಿ ಕೂಡಲೇ ಅವರ ಮೊಬೈಲ್‌ಗೆ ವಿಷಯ ತಿಳಿಸಿದ್ದರು. ಯಾರನ್ನಾದರೂ ಸಹಾಯಕ್ಕೆ ಕರೆಯುವಂತೆ ಹೇಳಿದ್ದರು. ವಿಷಯ ತಿಳಿದ ರಜನಿ ಅವರು ಕೂಡಲೇ ಹಲವು ಮಂದಿಗೆ ಕರೆ ಮಾಡಿ ಸಹಾಯಕ್ಕೆ ಬರುವಂತೆ ಯಾಚಿಸಿದರೂ ಯಾರೂ ಬಂದಿರಲಿಲ್ಲ. ಆಗ ರಜನಿ ತಾನೇ ಬಾವಿಯ ಕಡೆ ಧಾವಿಸಿದರು. ಆಗಲೇ ಶ್ವಾನ ಈಜಿ ಸುಸ್ತಾಗಿ ಬಾವಿಯ ಮೂಲೆಯೊಂದರಲ್ಲಿ ರಕ್ಷಣೆ ಪಡೆದಿತ್ತು. ಈ ಸಂದರ್ಭ ಸ್ಥಳೀಯರು ಬೇಡ ಎಂದು ಹೇಳಿದರೂ, ಸರಿಯಾಗಿ ಈಜು ಬರದ ರಜನಿಯವರು 30 ಅಡಿಯ ಬಾವಿಗೆ ಇಳಿಯುವ ಧೈರ್ಯ ಮಾಡಿದರು. ಸ್ಥಳಕ್ಕೆ ಮತ್ತಷ್ಟುಜನರನ್ನು ಬರಲು ಹೇಳಿ ಈಕೆಯ ಸೊಂಟಕ್ಕೆ ಹಗ್ಗಕಟ್ಟಿಬಾವಿಗಿಳಿಸಲಾಯಿತು.

ಗಂಡನ ಬಿಟ್ಟು ಬಂದವಳಿಗೆ ಬೇಕಿತ್ತು ಪುರುಷನ ಸಂಗ, ಬಾವಿಯಲ್ಲಿತ್ತು ಇಬ್ಬರ ಹೆಣ

ರಕ್ಷಣೆಗೆ ಇಳಿದ ರಜನಿ ಶೆಟ್ಟಿ ಅವರು ಶ್ವಾನದ ಸೊಂಟಕ್ಕೆ ಹಗ್ಗ ಕಟ್ಟಲು ಯತ್ನಿಸಿದರು. ಈ ವೇಳೆ ಅವರಿಗೆ ಶ್ವಾನ ಕಚ್ಚುವ ಪ್ರಯತ್ನ ಮಾಡಿದರೂ ಅವರು ಧೃತಿಗೆಡಲಿಲ್ಲ. ಜೇಡಿ ಮಣ್ಣಿನ ಜಾರುವ ಬಾವಿಯಲ್ಲಿ ತೀರಾ ಅಪಾಯದಲ್ಲೂ ಮಹಿಳೆ ಶ್ವಾನದ ಸೊಂಟಕ್ಕೆ ಹಗ್ಗ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಶ್ವಾನವನ್ನು ಮೇಲೆತ್ತಲಾಯಿತು. ಬಳಿಕ ಎರಡೂ ಹಗ್ಗಗಳ ಸಹಾಯದಿಂದ ಮಹಿಳೆಯನ್ನೂ ದಡಕ್ಕೆ ಎಳೆಯಲಾಯಿತು. ಮಹಿಳೆಯ ಈ ಸಾಹಸ ಎಲ್ಲರ ಶ್ಲಾಘನೆಗೆ ಕಾರಣವಾಯಿತಲ್ಲದೆ, ಯುವಕರು ನಾಚಿಕೆ ಪಡುವಂತಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.