KSRTC ಬಸ್ ಡ್ರೈವರ್‌ಗಳಿಗೆ ಕೊರೋನಾ ಕಾಟ..!
ತುಮಕೂರಿನ KSRTC ಬಸ್ ಡ್ರೈವರ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. KSRTC ಡ್ರೈವರ್‌ನಿಂದಾಗಿ 2 ಜಿಲ್ಲೆಯ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ತುಮಕೂರು(ಮೇ.25): ಪೊಲೀಸರ ಬಳಿಕ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕರಿಗೆ ಕೊರೋನಾ ಕಾಟ ಶುರುವಾಗಿದೆ. ಕೆಲದಿನಗಳಿಂದ ಪೊಲೀಸರಿಗೆ ಕೊರೋನಾ ತಗುಲಿರುವ ಬಗ್ಗೆ ಸುದ್ದಿಯಾಗುತ್ತಿತ್ತು. ಇದೀಗ ಡ್ರೈವರ್‌ಗಳ ಸರದಿ ಎನಿಸಿದೆ.
ತುಮಕೂರಿನ KSRTC ಬಸ್ ಡ್ರೈವರ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. KSRTC ಡ್ರೈವರ್‌ನಿಂದಾಗಿ 2 ಜಿಲ್ಲೆಯ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ಕೊರೋನಾಗೆ ಬೆಂಗಳೂರಲ್ಲಿ ಮತ್ತೊಂದು ಬಲಿ..!
ಮಾಗಡಿ ಡಿಪೋದಲ್ಲಿ KSRTC ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತುಮಕೂರಿನಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಬರುತ್ತಿದ್ದರು. ಈ ಡ್ರೈವರ್‌ಗೆ ಈಗ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.