Asianet Suvarna News Asianet Suvarna News

ಕೃಷ್ಣಾ ನದಿ ಪ್ರವಾಹದ ಮಧ್ಯೆಯೇ ಮನೆ ಸಾಮಾನು ಸಾಗಿಸಿದ ಕುಟುಂಬ

Aug 2, 2019, 8:38 PM IST

ಬಾಗಲಕೋಟೆ [ಆ. 02]  ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾನದಿ ಪ್ರವಾಹ ಹೆಚ್ಚಾಗಿದೆ. ಪ್ರವಾಹದ ಮಧ್ಯೆಯೇ ಮನೆಯ ಸಾಮಾನು ಸರಂಜಾಮುಗಳನ್ನು ನದಿ ತೀರದ ಗ್ರಾಮಸ್ಥರು ಹೊತ್ತೊಯ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ  ಬೀಳುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ಜೀವ ಕೈಯಲ್ಲಿ ಹಿಡಿದು ಕೃಷ್ಣಾ ನದಿ ದಾಟುವ ಸ್ಥಿತಿ ಕಂಕನವಾಡಿ ಗ್ರಾಮಸ್ಥರಿಗಾಗಿದೆ.

ಟ್ರಂಕ್ ಸಹಿತ ದಿನಬಳಕೆ ವಸ್ತುಗಳನ್ನ ತಲೆ ಮೇಲೆ ಹೊತ್ತು ಸುರಕ್ಷಿತ ತಾಣಗಳಿಗೆ ತೆರಳುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕನವಾಡಿ ಗ್ರಾಮದ ಗುರುಪಾದಪ್ಪನವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು  ಸುರಕ್ಷಿತ ಸ್ಥಳಕ್ಕೆ ಹರಸಾಹಸ ಪಟ್ಟು ತಲುಪಿದೆ.

ಘಟಪ್ರಭಾ ನದಿಗೂ ಅಪಾರ ನೀರು  ಹರಿದು ಬರುತ್ತಿರುವುದರಿಂದ ಮಾಚಕನೂರ ದೇವಾಲಯ ಜಲಾವೃತವಾಗಿದೆ. ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರ ಗ್ರಾಮಕ್ಕೆ  ದೂಪದಾಳ ಜಲಾಶಯದಿಂದ ಹೊರಬಿಟಟಿರುವ ನೀರು ನುಗ್ಗಿದೆ. ಹಿರಣ್ಯಕೇಶಿ ನದಿಯಿಂದಲೂ ಘಟಪ್ರಭಾ ಭಾರೀ  ಪ್ರಮಾಣದಲ್ಲಿ ನೀರು ಬರುತ್ತಿದೆ.  ಮುಧೋಳ ತಾಲೂಕಿನ ಕೆಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.  ಜಿಲ್ಲೆಯ ನಂದಗಾಂವ, ಮಿಜಿ೯, ಡವಳೇಶ್ವರ ಗ್ರಾಮಸ್ಥರಿಗೆ ಪ್ರವಾಹ ಭೀತಿ ಎದುರಿಸುತ್ತಿವೆ.