Asianet Suvarna News Asianet Suvarna News

ಕೋರಮಂಗಲ ಕ್ಲಬ್‌ ಸದಸ್ಯರಿಗೆ ವಿಶೇಷ ಕ್ರೀಡಾಕೂಟ: 2 ವಾರ ನಡೆದ ಕ್ರೀಡೆಗೆ ಅದ್ಧೂರಿ ತೆರೆ

ಪ್ರತಿ ವರ್ಷದಂತೆ ಈ ವರ್ಷವೂ ಕೋರಮಂಗಲ ಕ್ಲಬ್ ಸದಸ್ಯರಿಗೆ 2024 ವಿವಿಧ ಆಟಗಳ ಕ್ರೀಡೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ  196 ಜನ ಕ್ರೀಡಾಪಟುಗಳು ಭಾಗವಹಿಸಿದ್ರು.

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಕೋರಮಂಗಲ ಕೂಡ ಒಂದು. ಪ್ರತಿ ವರ್ಷದಂತೆ ಈ ವರ್ಷವೂ ಕೋರಮಂಗಲ ಕ್ಲಬ್ ಸದಸ್ಯರಿಗೆ 2024 ವಿವಿಧ ಆಟಗಳ ಕ್ರೀಡೆಯನ್ನು ಏರ್ಪಡಿಸಲಾಗಿತ್ತು. ಹಿರಿಯರು ಹಾಗೂ ಕಿರಿಯರು ಸೇರಿದಂತೆ ಎರಡು ವಿಭಾಗಗಳಲ್ಲಿ ಕ್ರೀಡೆಯನ್ನು ಆಯೋಜನೆ ಮಾಡಲಾಗಿತ್ತು. ಕಳೆದ ಎರಡು ವಾರಗಳ ಕಾಲ ನಡೆದ ಕೋರಮಂಗಲ ಕ್ರೀಡೆಗೆ ಇಂದು ಅದ್ಧೂರಿ ತೆರೆ ಬಿದ್ದಿದೆ. ಟೇಬಲ್ ಟೆನ್ನಿಸ್, ಟೆನ್ನಿಸ್, ಪುಟ್‌ಬಾಲ್, ‌ಚೆಸ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಸುಮಾರು 196 ಜನ ಕ್ರೀಡಾಪಟುಗಳು ಭಾಗವಹಿಸಿದ್ರು. ಇನ್ನೂ ಕ್ರೀಡೆಯಲ್ಲಿ ಭಾಗವಹಿಸಿದ್ದ ಕ್ಲಬ್ ನ ಸದಸ್ಯರಿಗೆ ಬಹುಮಾನವನ್ನ ನಿವೃತ್ತ ಪೊಲೀಸ್ ಅಧಿಕಾರಿ ಬಿ‌ಎನ್ ಎಸ್ ರೆಡ್ಡಿ ವಿತರಣೆ ಮಾಡಿದ್ರು.ಕಾರ್ಯಕ್ರಮದಲ್ಲಿ ಕೋರಮಂಗಲ ಕ್ಲಬ್ ನ ಅಧ್ಯಕ್ಷ ಸಿ.ರಾಜೇಂದ್ರ, ಸೆಕ್ರೆಟರಿ ಡಾ.ಕೆ.ಜೆ.ಪುರುಷೋತ್ತಮ ಸೇರಿದಂತೆ ಕ್ಲಬ್ ಪದಾಧಿಕಾರಿಗಳು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.

ಇದನ್ನೂ ವೀಕ್ಷಿಸಿ:  Priyanka Gandhi in Karnataka: ನಾಳೆ ಕರ್ನಾಟಕ ರಣಕಣಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ! ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ