Asianet Suvarna News Asianet Suvarna News

ಕೊಪ್ಪಳ: ಮಹಿಳಾ ಸುರಕ್ಷತೆಗೆ ವಿಶೇಷ ಕಾನೂನು ತರಲು ಸಹಿ ಸಂಗ್ರಹ

- ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ

- ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಕೊಪ್ಪಳದಲ್ಲಿ  ಪ್ರತಿಭಟನೆ 

- ಅಶೋಕ ವೃತ್ತದಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬೃಹತ್ ರ‍್ಯಾಲಿ

Sep 19, 2021, 4:41 PM IST

ಕೊಪ್ಪಳ (ಸ. 19): ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ಅಶೋಕ ವೃತ್ತದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. 

ಅತ್ಯಾಚಾರಿಗಳ ವಿರುದ್ಧ ಪ್ರತಿಭಟನಾನಿರತ ಮಹಿಳೆಯರು ಘೋಷಣೆ ಕೂಗಿದರು.  ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಕಾನೂನು ಜಾರಿಗೆ ತರಲು ಒತ್ತಾಯಪಡಿಸಲಾಯಿತು. ಮಹಿಳೆಯರಿಂದ ಸಹಿ ಸಂಗ್ರಹವನ್ನೂ ಮಾಡಲಾಯಿತು.