Asianet Suvarna News Asianet Suvarna News

ಮೂರು ತಿಂಗಳು ಕಂಟಕ, ಜನರು ಹುಚ್ಚರಾಗ್ತಾರೆ: ಕೋಡಿ ಶ್ರೀಗಳ ಭವಿಷ್ಯ

ಕೋಡಿ ಶ್ರೀಗಳು ಭಯಂಕರ ಭವಿಷ್ಯ ನುಡಿದಿದ್ದಾರೆ. ಮುಂದಿನ ಮೂರು ತಿಂಗಳು ಕಂಟಕವಿದ್ದು, ವರುಣಾರ್ಭಟ, ಭೂಕಂಪ, ಯುದ್ಧಭೀತಿಯ ಮುನ್ಸೂಚನೆ ಕೊಟ್ಟಿದ್ದಾರೆ.
 

First Published Oct 31, 2022, 5:50 PM IST | Last Updated Oct 31, 2022, 5:50 PM IST

ಕೋಡಿ ಶ್ರೀಗಳು ಭವಿಷ್ಯ ಕೇಳಿದರೆ ಎಲ್ಲರೂ ಒಂದು ಕ್ಷಣ ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಅವರು ಹೇಳಿರೋ ಭಯಂಕರ ಭವಿಷ್ಯಗಳು ಸುಳ್ಳಾಗಿದ್ದೇ ಇಲ್ಲ. ಇದೀಗ ಮತ್ತೊಂದು ರಣ ಭಯಂಕರ ಭವಿಷ್ಯವನ್ನ ಕೋಡಿ ಶ್ರೀಗಳು ನುಡಿದಿದ್ದಾರೆ. ದಾರಿಯಲ್ಲೇ ಕುಸಿದು ಬಿದ್ದು ಸಾಯ್ತಾರೆ ಎಂದು ಭವಿಷ್ಯ ನುಡಿದ ಒಂದೇ ವಾರಕ್ಕೆ ಆ ಭವಿಷ್ಯ ನಿಜವಾಗ್ಬಿಟ್ಟಿದೆ. 150ಕ್ಕೂ ಹೆಚ್ಚು ಮಂದಿ ನಡು ರಸ್ತೆಯಲ್ಲೇ ಕುಸಿದು ಬಿದ್ದು ಸತ್ತೇ ಹೋಗಿದ್ದಾರೆ. ಇದೀಗ ಜನವರಿವರೆಗೂ ಕಂಟಕ ತಪ್ಪಿದ್ದಲ್ಲ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಂತ ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.