ಪ್ರವಾಸಿಗರೇ ಗಮನಿಸಿ: ಅ.17ರ ವರೆಗೆ ಮಡಿಕೇರಿಯ ಪ್ರವಾಸಿ ತಾಣಗಳು ಬಂದ್
ದಸರಾ ಹಾಗೂ ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಮಡಿಕೇರಿಯ ಪ್ರವಾಸಿ ತಾಣಗಳು ಬಂದ್ ಮಾಡಲಾಗಿದೆ. ಅ.17ರ ವರೆಗೆ ಪ್ರವಾಸಿ ತಾಣಗಳನ್ನು ಕೊಡಗು ಜಿಲ್ಲಾಡಳಿತ ಬಂದ್ ಮಾಡಿದೆ.
ಮಡಿಕೇರಿ (ಅ. 10): ದಸರಾ ಹಾಗೂ ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಮಡಿಕೇರಿಯ ಪ್ರವಾಸಿ ತಾಣಗಳು ಬಂದ್ ಮಾಡಲಾಗಿದೆ. ಅ.17ರ ವರೆಗೆ ಪ್ರವಾಸಿ ತಾಣಗಳನ್ನು ಕೊಡಗು ಜಿಲ್ಲಾಡಳಿತ ಬಂದ್ ಮಾಡಿದೆ. ಮಡಿಕೇರಿಯ ರಾಜಾಸೀಟ್, ನೆಹರು ಮಂಟಪ, ಜ.ತಿಮ್ಮಯ್ಯ ಮ್ಯೂಸಿಯಂ, ಮಡಿಕೇರಿಯ ಕೋಟೆ ಬಂದ್ ಮಾಡಿ ಆದೇಶ ಹೊರಡಿಸಿದೆ.
ಕೋವಿಡ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಮಡಿಕೇರಿಯ ಪ್ರವಾಸಿ ತಾಣಗಳಿಗೆ ಮಾತ್ರ ನಿಯಮ ಅನ್ವಯವಾಗಲಿದೆ. ಜಿಲ್ಲೆಯ ಇತರೆಡೆಗಳಲ್ಲಿ ಪ್ರವಾಸಿ ತಾಣಗಳು ಎಂದಿನಂತೆ ತೆರೆದಿರಲಿವೆ.