ಇದು ಬರೀ ಸೈಕಲಲ್ಲ, ಮೋಟಾರ್ ಚಾಲಿತ ಸೈಕಲ್, ಇದರ ಸ್ಪೆಷಾಲಿಟಿಯೇ ಬೇರೆ...!

ಪಿಯುಸಿ ಓದುತ್ತಿರುವ ಆ ಇಬ್ಬರು ವಿದ್ಯಾರ್ಥಿಗಳು 5-6 ಕಿ.ಮೀ. ಸೈಕಲ್  ಹೊಡೆದುಕೊಂಡೇ ಪ್ರತಿನಿತ್ಯ ಕಾಲೇಜಿಗೆ ತೆರಳುತ್ತಿದ್ದರು. ದಿನಾ ಸೈಕಲ್ ತುಳಿದು ತುಳಿದು ಬೇಸರವಾಗಿ ಹೊಸದೇನನ್ನಾದರೂ ಮಾಡುವ ಯೊಚನೆ ಮಾಡಿದರು. 

First Published Jan 26, 2021, 4:09 PM IST | Last Updated Jan 26, 2021, 4:09 PM IST

ಉತ್ತರ ಕನ್ನಡ (ಜ. 26):  ಪಿಯುಸಿ ಓದುತ್ತಿರುವ ಆ ಇಬ್ಬರು ವಿದ್ಯಾರ್ಥಿಗಳು 5-6 ಕಿ.ಮೀ. ಸೈಕಲ್  ಹೊಡೆದುಕೊಂಡೇ ಪ್ರತಿನಿತ್ಯ ಕಾಲೇಜಿಗೆ ತೆರಳುತ್ತಿದ್ದರು. ದಿನಾ ಸೈಕಲ್ ತುಳಿದು ತುಳಿದು ಬೇಸರವಾಗಿ ಹೊಸದೇನನ್ನಾದರೂ ಮಾಡುವ ಯೊಚನೆ ಮಾಡಿದರು.  

ತಮ್ಮ ಸೈಕಲ್‌ಗಳನ್ನು ಮೋಟಾರ್ ಚಾಲಿತವನ್ನಾಗಿ ಯಾಕೆ ಮಾಡಬಾರದು ? ಅನ್ನೋ ಐಡಿಯಾ ಬಂತು. ಅದರಂತೆ ತಿಂಗಳ ಕಾಲ ಪರಿಶ್ರಮವಹಿಸಿದ ವಿದ್ಯಾರ್ಥಿಗಳು ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಕಡಿಮೆ ಖರ್ಚಿನಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಇಕೋ ಫ್ರೆಂಡ್ಲಿ ಸೈಕಲ್ ಸಿದ್ಧವಾಗಿದ್ದು, ಇದನ್ನು ಚಲಾಯಿಸಿಕೊಂಡೇ ಕಾಲೇಜಿಗೆ ತೆರಳುತ್ತಿದ್ದಾರೆ. ಈ ಸೈಕಲ್‌ನ ವಿಶೇಷತೆಗಳೇನು..? ನೀವೇ ನೋಡಿ...!