Asianet Suvarna News Asianet Suvarna News

ಕಾರವಾರ: ಸಾವಿರಾರು ರೂಪಾಯಿ ನೀರಿನ ಬಿಲ್, ಗ್ರಾಹಕರಿಗೆ ಶಾಕ್.!

Aug 13, 2021, 4:13 PM IST

ಕಾರವಾರ (ಆ. 13): ಜನರಿಗೆ ಮೂರ್ನಾಲ್ಕು ಪಟ್ಟು ನೀರಿನ ಬಿಲ್ ಹಾಕಿ ಕೊಟ್ಟ ಕಾರವಾರ ನಗರಸಭಾ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ ಕಳೆದ ಸಾಲಿನ ಏಪ್ರಿಲ್‌ನಿಂದ ಡಿಸಂಬರ್‌ವರೆಗೆ ನೀರಿನ ಬಿಲ್ ಕಟ್ಟಿದ್ದಾರೆ.

ಆದರೆ ಅಧಿಕಾರಿಗಳು ಈ ಬಾರಿ 4 ಸಾವಿರ, 5 ಸಾವಿರ ಬಿಲ್ ಹಾಕಿದ್ದಾರೆ. ವಾರಕ್ಕೆ ಮೂರ್ನಾಲ್ಕು ಬಾರಿ ಮಾತ್ರ ನೀರು ಬಿಡುತ್ತಾರೆ. ಇಷ್ಟೊಂದು ಬಿಲ್ ಬರಲು ಹೇಗೆ ಸಾಧ್ಯ.? ಎಂದು ಪ್ರಶ್ನಿಸಿದ್ದಾರೆ. ಜನಾಕ್ರೋಶಕ್ಕೆ ಮಣಿದ ಅಧಿಕಾರಿಗಳು ಬಿಲ್ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. 

ಲಸಿಕೆ ವಿತರಣೆಯಲ್ಲಿ ಹಿಂದುಳಿದಿವೆ 18 ಜಿಲ್ಲೆಗಳು, 3 ನೇ ಅಲೆ ಆತಂಕ..!