Yadgir: ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ: ಜನರನ್ನು ಅಲಿಸುವಂತ ಚಾಳಿ ಬಿಡಿಸಿದ್ದೇನೆ: ಅಶೋಕ್

*   ಯಾದಗಿರಿ ತಾಲೂಕಿನ ದೇವತ್ಕಲ್‌ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ
*   ರಾಜ್ಯದ 250 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ 
*   ಜನರಿಗೆ ಅಲೆದಾಡುಸುವ ಬದಲು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ 
 

First Published Mar 20, 2022, 11:25 AM IST | Last Updated Mar 20, 2022, 11:25 AM IST

ಯಾದಗಿರಿ(ಮಾ.20): ಕಂದಾಯ ಸಚಿವ ಆರ್‌. ಅಶೋಕ್‌ ಅವರು ಯಾದಗಿರಿ ತಾಲೂಕಿನ ದೇವತ್ಕಲ್‌ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾರೆ. ನಿನ್ನೆ(ಶನಿವಾರ) ಜಮಖಾನಾ ಮೇಲೆ ಮಲಗಿದ್ದಾರೆ. ಈ ವೇಳೆ ಮಾತನಾಡಿದ ಸಚಿವರು ಗ್ರಾಮ ವಾಸ್ತವ್ಯದಿಂದ ಸರ್ಕಾರದ ಯೋಜನೆಗಳನ್ನ ಜನರಿಗೆ ತಿಳಿಸಬಹುದು. ಡಿಸಿ, ಎಸಿ ಕಚೇರಿಗಳಿಗೆ ಅಲೆಯುವ ಪರಿಪಾಟ ತಪ್ಪಿಸಬೇಕಿದೆ ಅಂತ ತಿಳಿಸಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಸಚಿವರು, ರಾಜ್ಯದ 250 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತಿದೆ. ಅಧಿಕಾರಿಗಳು ಹಳ್ಳಿಗೆ ಬರೋ ಪರಿಪಾಟ ಬರಬೇಕು. ಜನರಿಗೆ ಅಲೆದಾಡುಸುವ ಬದಲು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಅಂತ ಹೇಳಿದ್ದಾರೆ. 

Bidar: ತಿನ್ನಲು ಮೇವಿಲ್ಲದೆ ಮೂಕಪ್ರಾಣಿಗಳ ನರಳಾಟ..!