ಹಸಿದವರ 'ಅಯ್ಯ' ಗೋಪಾಲಯ್ಯ, ಲಾಕ್ ಡೌನ್ ನಡುವೆ ನೆರವಿಗೆ ನಿಂತ ನೇತಾರ
ಜನರ ಹಸಿವು ನೀಗಿಸಿದ ಗೋಪಾಲಯ್ಯ/ ಕಷ್ಟಕ್ಕೆ ತಕ್ಷಣ ಸ್ಪಂದಿಸುವ ಜನನಾಯಕ/ ಮಹಾಲಕ್ಷ್ಮೀ ಲೇಔಟ್ ನೇತಾರ/ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರ ಮಾದರಿ ಕೆಲಸ
ಬೆಂಗಳೂರು(ಮೇ 31) ಲಾಕ್ ಡೌನ್ ಸಂದರ್ಭ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈ ಜನನಾಯಕ ಮಾತ್ರ ತಕ್ಷಣ ಸ್ಪಂದಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೌದು ಆಹಾರ ಸಚಿವ ಕೆ.ಗೋಪಾಲಯ್ಯ ಮಾದರಿ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದ ಗೋಪಾಲಯ್ಯ ಜನರ ಕಣ್ಣೀರು ಒರೆಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಬಡವರ ಪಾಲಿಗೆ ಆಪತ್ಭಾಂಧವರಾಗಿ ನಿಂತಿದ್ದಾರೆ.