Nanna voṭu nanna matu: ಬಿಜೆಪಿ ಹಿಂದೂ-ಮುಸ್ಲಿಂ ಎಂಬ ತಾರತಮ್ಯ ಮಾಡುತ್ತೆ: ವಿದ್ಯಾರ್ಥಿನಿಯರು ಹೇಳಿದ್ದೇನು?

ನಮ್ಮ ರಾಜ್ಯ ಅಭಿವೃದ್ಧಿಯಾಗಬೇಕು. ಬಿಜೆಪಿ ಹಿಂದೂ-ಮುಸ್ಲಿಂ ಎಂಬ ಭೇದಭಾವ ಮಾಡುತ್ತದೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
 

First Published Feb 15, 2023, 4:41 PM IST | Last Updated Mar 3, 2023, 11:45 AM IST

ಕಾಂಗ್ರೆಸ್‌ ಯಾವುದೇ ತಾರತಮ್ಯ ಮಾಡಲ್ಲ, ಹಾಗಾಗಿ ನಾವು ಆ ಪಕ್ಷಕ್ಕೆ ಮತ ಹಾಕುತ್ತೇವೆ ಎಂದು ಫಸ್ಟ್ ಟೈಮ್ ವೋಟರ್ಸ್ ತಿಳಿಸಿದ್ದಾರೆ. ಹಿಜಾಬ್‌ ಪ್ರಕರಣವಾದಾಗ ಕಾಲೇಜು ಬಂದ್ ಆಯ್ತು. ಸ್ಟಡಿ ನಿಂತು ಹೋಗಿತ್ತು ಎಂದು ತಿಳಿಸಿದರು. ನಾನು ಮೊದಲ ಬಾರಿ ಓಟ್‌ ಮಾಡುತ್ತಿದ್ದೇನೆ, ತುಂಬಾ ಎಕ್ಸೈಟ್‌ ಆಗಿ ಇದ್ದೇನೆ ಎಂದು ಯುವಕನೊಬ್ಬ ತಿಳಿಸಿದ್ದಾನೆ. ಸ್ಕಾಲರ್‌ಶಿಪ್‌ ನೀಡಬೇಕು, ಒಬ್ಬ ವ್ಯಕ್ತಿಯನ್ನು ನೋಡಿ ನಾವು ಓಟ್‌ ಮಾಡುತ್ತೇವೆ. ಸಮಾಜದಲ್ಲಿನ ಎಲ್ಲಾ ವ್ಯಕ್ತಿಯನ್ನು ಸಮಾನತೆಯಿಂದ ಕಾಣುವವರು ಗೆಲ್ಲಬೇಕು ಎಂದು ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ ಕಾಲೇಜು ವಿದ್ಯಾರ್ಥಿಗಳು ಅಭಿಪ್ರಾಯ ತಿಳಿಸಿದ್ದಾರೆ.