Asianet Suvarna News Asianet Suvarna News

ಜುಲೈಯಲ್ಲಿ ಪದವಿ ಪರೀಕ್ಷೆ ಶುರು? UGC ಮಾರ್ಗಸೂಚಿ ಇದು

ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ| ಹೊಸದಾಗಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಸೆಪ್ಟಂಬರ್‌ನಿಂದ ಹಾಗೂ ಈಗಾಗಲೇ ವ್ಯಾಸಂಗ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ಆಗಸ್ಟ್‌ನಿಂದ ತರಗತಿಗಳು ಆರಂಭ|

ಬೆಂಗಳೂರು(ಏ.30): ಮಾರಕ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಬದಲಾವಣೆ ಮಾಡಿದೆ. ಅದರಂತೆ ಹೊಸದಾಗಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಸೆಪ್ಟಂಬರ್‌ನಿಂದ ಹಾಗೂ ಈಗಾಗಲೇ ವ್ಯಾಸಂಗ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ಆಗಸ್ಟ್‌ನಿಂದ ತರಗತಿಗಳು ಆರಂಭವಾಗಲಿವೆ ಎಂದು ಯುಜಿಸಿ ಹೇಳಿದೆ.

ಕೊರೋನಾ ಕೆಲಸಕ್ಕಿಂತ ಟಿಕ್‌ಟಾಕ್‌ನಲ್ಲೇ ಬ್ಯುಸಿ: ಸರ್ಕಾರಿ ನೌಕರರ ಉದ್ಧಟತನದ ವಿಡಿಯೋ ವೈರಲ್‌..!

ಈ ವಿಚಾರವಾಗಿ ನಿನ್ನೆಯಷ್ಟೇ ಶೈಕ್ಷಣಿಕ ವೇಳಾಪಟ್ಟಿ ಹಾಗೂ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಅಂತಿಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಯುಜಿಸಿ ತಿಳಿಸಿದೆ. 
 

Video Top Stories