Asianet Suvarna News Asianet Suvarna News

ಅಬ್ಬಬ್ಬಾ ಹಿಂದೆಂದೂ ಕಾಣದ ಸುಂಟರಗಾಳಿ ಅವತಾರ, ಬೆಚ್ಚಿಬಿದ್ದ ಕಾರ್ಕಳ

Aug 1, 2019, 6:46 PM IST

ಇಂದು ಬೆಳ್ಳಂಬೆಳಗ್ಗೆ ಕಾರ್ಕಳದ‌‌ ಜನತೆ ಒಂದು ಕ್ಷಣ ಬೆಚ್ಚಿಬೀಳಿಸುವ ದೃಶ್ಯಾವಳಿ‌ ಕಂಡುಬಂದಿದೆ. ಧಿಡೀರ್ ಎದ್ದ ಸುಂಟರಗಾಳಿಗೆ ನೀರು‌ 200ಮೀಟರ್ ಎತ್ತರಕ್ಕೆ ಚಿಮ್ಮಿದೆ. ಉಡುಪಿ‌ ಜಿಲ್ಲೆಯ ‌ಕಾರ್ಕಳ ತಾಲೂಕಿನ ‌ಕೊಪ್ಪಳ ಮಂಚಕಲ್ಲು ಬಳಿ ಸುಂಟರಗಾಳಿ‌ ರುದ್ರನರ್ತನವಾಡಿದ್ದರಿಂದ ಇಲ್ಲಿನ ಸುಲೋಚನ ನಾಯಕ್ ಮನೆ ಹಾಗೂ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಮಾಲಿಂಗ ಶೆಟ್ಟಿಯವರ ಅಡಿಕೆ ತೋಟ ಹಾಗೂ ಬೃಹತ್ ಗಾತ್ರದ ಮರ ಧರಾಶಾಹಿ ಯಾಗಿದೆ. ಕುಂಬ್ರಿ ಪದಗಳಲ್ಲಿ ಬೀಸಿದ ಸುಂಟರಗಾಳಿಗೆ ಗದ್ದೆಗಳ ನೀರು ಸುಮಾರು 200 ಮೀಟರ್ ಮೇಲಕ್ಕೆ ಎದ್ದಿದೆ. ಈ ರೀತಿ ಸುಂಟರಗಾಳಿ ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಸುಂಟರಗಾಳಿಯಿಂದ ಸುಮಾರು 20 ಲಕ್ಷ ರೂ.  ಹಾನಿ ಉಂಟಾಗಿದೆ.  ಸ್ಥಳಕ್ಕೆ ಕಾರ್ಕಳ ದಂಡಾಧಿಕಾರಿ ಪುರಂದರ ಹೆಗಡೆ. ಹಾಗೂ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.