BIG 3 Impact: ಅದ್ದೂರಿಯಾಗಿ ಉದ್ಘಾಟನೆಯಾಯ್ತು ಕಂಪ್ಲಿ ರೈತ ಸಂಪರ್ಕ ಕೇಂದ್ರ
ಅದು ರೈತರಿಗೆ ಉಪಯೋಗವಾಗಲಿ ಎಂದು ಲಕ್ಷ ಲಕ್ಷ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರೈತ ಸಂಪರ್ಕ ಕೇಂದ್ರ. ಆದ್ರೇ, ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜಾವಾಬ್ದಾರಿತನದಿಂದ ಪಾಳು ಬಿಳೋ ಸ್ಥಿತಿಯಲ್ಲಿತ್ತು. ಏಷ್ಯಾನೆಟ್ ಸುವರ್ಣನ್ಯೂಸ್ BIG-3ಯಲ್ಲಿ ವರದಿ ಪ್ರಸಾರ ಬಳಿಕ ಈಗ ಜೀವ ಬಂದಿದೆ.
ಬಳ್ಳಾರಿ (ಡಿ.15): ಅದು ರೈತರಿಗೆ ಉಪಯೋಗವಾಗಲಿ ಎಂದು ಲಕ್ಷ ಲಕ್ಷ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರೈತ ಸಂಪರ್ಕ ಕೇಂದ್ರ. ಆದ್ರೇ, ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜಾವಾಬ್ದಾರಿತನದಿಂದ ಪಾಳು ಬಿಳೋ ಸ್ಥಿತಿಯಲ್ಲಿತ್ತು. ಈ ಬಗ್ಗೆ BIG-3 ವರದಿ ಪ್ರಸಾರ ಮಾಡಿತ್ತು. ಸಾಮಾನ್ಯವಾಗಿ ರೈತ ಸಂಪರ್ಕ ಕೇಂದ್ರವನ್ನು ಪ್ರತಿಯೊಂದು ತಾಲೂಕಿನಲ್ಲಿ ಮಾಡೋ ಉದ್ದೇಶ ರೈತರಿಗೆ ಮತ್ತು ಕೃಷಿ ಇಲಾಖೆಯ ಮಧ್ಯೆ ಕೊಂಡಿಯಂತೆ ಕೆಲಸ ಮಾಡಲಿ ಎಂದು. ಆದ್ರೇ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನಲ್ಲಿ ಲಕ್ಷ-ಲಕ್ಷ ಖರ್ಚು ಮಾಡಿ ಕಟ್ಟಿದ ರೈತ ಸಂಪರ್ಕ ಕೇಂದ್ರವನ್ನು 3 ವರ್ಷವಾದ್ರೂ ಉದ್ಘಾಟನೆ ಮಾಡಿರಲಿಲ್ಲ. ಅದ್ಯಾವಾಗ ಏಷ್ಯಾನೆಟ್ ಸುವರ್ಣನ್ಯೂಸ್ BIG-3ಯಲ್ಲಿ ವರದಿ ಪ್ರಸಾರ ಆಯ್ತೋ, ಸಂಭಂದಿಸಿದ ಅಧೀಕಾರಿಗಳು, ಜನಪ್ರತಿನಿಧಿಗಳೆಲ್ಲಾ ಫುಲ್ ಅಲರ್ಟ್ ಆದ್ರು. ಉದ್ಘಾಟನೆಗೆ ಸಕಲ ಸಿದ್ದತೆ ಮಾಡಿಕೊಂಡ್ರು. ಕೂಡಲೇ ಉದ್ಘಾಟನೆ ದಿನಾಂಕ ನಿಗಧಿ ಮಾಡಿ ಇನ್ವಟೆಷನ್ ಕೂಡ ಪ್ರಿಂಟ್ ಹಾಕಿಸಿದ್ರು. ಜಘ ಮಗಿಸುವಂತೆ ಕಟ್ಟಡವನ್ನ ತಳಿರು ತೋರಣ ಕಟ್ಟಿ, ರಂಗೂಲಿ ಹಾಕಿ, ಬಲೂನ್ ಗಳಿಂದ ಸಿಂಗಾರ ಮಾಡಿದ್ರು. ದೊಡ್ಡ ದೊಡ್ಡ ಬ್ಯಾನರ್ಗಳನ್ನ ಹಾಕಿ ಸಂಭ್ರಮಿಸಿದ್ರು.