Asianet Suvarna News Asianet Suvarna News

ಪ್ರವಾಹದಲ್ಲಿ ಕಿತ್ತು ಹೋದ ಶಾಲೆಯ ಛಾವಣಿ: ಸ್ಕೂಲ್‌ನತ್ತ ತಿರುಗಿನೋಡದ ಜನಪ್ರತಿನಿಧಿಗಳು

ಭೀಕರ ಪ್ರವಾಹದಿಂದ ಹಾನಿಗೊಳಗಾದ ಸರ್ಕಾರಿ ಶಾಲೆ| ಪ್ರವಾಹದಲ್ಲಿ ಕಿತ್ತು ಹೋದ ಬೆಳಗಾವಿ ತಾಲೂಕಿನ ಕಮಕಾರಟ್ಟಿ ಶಾಲೆಯ ಛಾವಣೆ| ಹನುಮಾನ ದೇವಸ್ಥಾನದಲ್ಲಿ ನಡೆಯುತ್ತಿರುವ ಪಾಠ, ಪ್ರವಚನ|
 

ಬೆಳಗಾವಿ(ಫೆ.07): ಕಳೆದ ವರ್ಷ ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳು ಹಾನಿಗೊಳಗಾಗಿದ್ದವು. ಈ ಪ್ರವಾಹದಲ್ಲಿ ತಾಲೂಕಿನ ಕಮಕಾರಟ್ಟಿ ಶಾಲೆಯ ಛಾವಣಿ ಕಿತ್ತು ಹೋಗಿದೆ. ಆದರೆ, ಇಂದಿಗೂ ಈ ಶಾಲೆಯ ಛಾವಣೆ ಮಾತ್ರ ದುರಸ್ತಿಯಾಗಿಲ್ಲ. ಪ್ರವಾಹ  ಬಂದು ಹೋಗಿ ಹಲವು ತಿಂಗಳು ಗತಿಸಿದರೂ ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲವೇನೋ ಎಂಬಂತೆ ತಮ್ಮ ಪಾಡಿಗೆ ತಾವಿದ್ದಾರೆ.

ಶಾಲೆಯ ಛಾವಣಿ ಕಿತ್ತು ಹೋಗಿದ್ದರಿಂದ ಹತ್ತಿರದ ಹನುಮಾನ ದೇವಸ್ಥಾನವೊಂದರಲ್ಲಿ ಮಕ್ಕಳಿಗೆ ಪಾಠ ಪ್ರವಚನ ನಡೆಯುತ್ತಿದೆ. ಈ ದೇವಸ್ಥಾನದಲ್ಲಿ ಮಕ್ಕಳಿಗೆ ಕೂರೋಕೆ ಸಮಸ್ಯೆಯಾಗುತ್ತಿದೆ. ಆದರೂ ಕೂಡ ಇದೇ ದೇವಸ್ಥಾನದಲ್ಲಿ ಪಾಠ, ಪ್ರವಚನ ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ಯಾವ ಜನಪ್ರತಿನಿಧಿಗಳೂ ಈ ಶಾಲೆಯ ದುರಸ್ತಿ ಮಾಡಿಸುವಲ್ಲಿ ಮನಸ್ಸು ಮಾಡಿಲ್ಲ. 

ಅಪ್ಡೇಟ್ಸ್:

"


 

Video Top Stories