Asianet Suvarna News Asianet Suvarna News

ಇನ್ನೂ ಕೆಲವೇ ದಿನಗಳಲ್ಲಿ ದೇವೇಗೌಡರಿಗೆ ಕಾದಿದೆ ಆಘಾತಕಾರಿ ಸುದ್ದಿ!

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಆಪರೇಷನ್ ಜೆಡಿಎಸ್ ಆರಂಭ| ದೇವೇಗೌಡರಿಗೆ ಆಘಾತ ನೀಡಲು ಸಜ್ಜಾದ ಎಸ್. ಎಂ ಕೃಷ್ಣ | ಜೆಡಿಎಸ್ ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಕೃಷ್ಣ ಅವರಿಂದ ಮಾಸ್ಟರ್ ಪ್ಲಾನ್ ರೆಡಿ| 

First Published Dec 19, 2019, 1:32 PM IST | Last Updated Dec 19, 2019, 1:34 PM IST

ಮಂಡ್ಯ(ಡಿ.19): ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸದ್ದಿಲ್ಲದೆ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಆಪರೇಷನ್ ಜೆಡಿಎಸ್ ಆರಂಭಿಸಿದ್ದಾರೆ. ಹೌದು, ಈ ಮೂಲಕ ಜೆಡಿಎಸ್ ಖಾಲಿ ಮಾಡಲು ಕೃಷ್ಣ ಯತ್ನ ನಡೆಸಿದ್ದಾರೆ. ಈ ಮೂಲಕ ಜೆಡಿಎಸ್ ಭದ್ರೆ ನೆಲೆ ಮಂಡ್ಯದಲ್ಲೇ ಮತ್ತೆರಡು ಶಾಕ್ ನೀಡಲು ಕೃಷ್ಣ ತಯಾರಿ ನಡೆಸಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಶಾಸಕರ ಆಪರೇಷನ್ ಕಮಲ ಮಾಡುವಲ್ಲಿ ನನ್ನದು ಪಾತ್ರ ಇದೆ ಎಂದು ಹೇಳಿದ್ದ ಎಸ್. ಎಂ ಕೃಷ್ಣ ಇದೀಗ ಮತ್ತೊಮ್ಮೆ ಆಪರೇಷನ್ ಜೆಡಿಎಸ್ ಮಾಡಲು ಹೊರಟಿದ್ದಾರೆ. 

ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಶ್ರೀರಣಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠ ಅವರನ್ನು ಬಿಜೆಪಿಯತ್ತ ಸೆಳೆಯಲು ಕೃಷ್ಣ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರೂ ಶಾಸಕರು ಬಿಜೆಪಿಗೆ ಬಂದಿದ್ದೇ ಆದರೆ ದೇವೆಗೌಡರಿಗೆ ಮಾತ್ರ ಆಘಾತವಾಗೋದು ಗ್ಯಾರಂಟಿ. ಜೆಡಿಎಸ್ ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಕೃಷ್ಣ ಯಾವೆಲ್ಲಾ ತಂತ್ರಗಳನ್ನ ಹೆಣೆದಿದ್ದಾರೆ ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.   
 

Video Top Stories