ಬಾಗಲಕೋಟೆ: ಸೇತುವೆಗೆ ವೀರ ಸಾವರ್ಕರ್ ನಾಮಕರಣ..!
ಜಂಬಗಿ ಸೇತುವೆಗೆ ವೀರ ಸಾವರ್ಕರ್ ಸೇತುವೆ ಎಂದು ನಾಮಕರಣ| ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿರುವ ಜಂಬಗಿ ಸೇತುವೆ| ಜಂಬಗಿ ಸೇತುವೆಗೆ ಅಧಿಕೃತವಾಗಿ ವೀರ ಸಾವರ್ಕರ್ ಹೆಸರಿಡಲು ಸರ್ಕಾರಕ್ಕೆ ಒತ್ತಾಯ| ಸಾವರ್ಕರ್ ಪ್ರತಿಷ್ಠಾನ, ಬಿಜೆಪಿ ಮಾಜಿ ಎಂಎಲ್ಸಿ ಜಿ.ಎಸ್. ನ್ಯಾಮಗೌಡರಿಂದ ಸೇತುವೆಗೆ ವೀರ ಸಾವರ್ಕರ್ ಹೆಸರು|
ಬಾಗಲಕೋಟೆ(ಜೂ.08): ಬೆಂಗಳೂರಿನಲ್ಲಿ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡಲು ವಿರೋಧದ ಮಧ್ಯೆಯೇ ಸೇತುವೆಗೆ ವೀರ ಸಾವರ್ಕರ್ ಎಂದು ನಾಮಕರಣ ಮಾಡಿದ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿ ಸೇತುವೆಗೆ ವೀರ ಸಾವರ್ಕರ್ ಎಂದು ಹೆಸರಿಡಲಾಗಿದೆ.
ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಕಾಡಿದ್ಯಾಕೆ? ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತುಗಳಿವು!
ಈ ಸೇತುವೆಯನ್ನ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಜಂಬಗಿ ಸೇತುವೆಗೆ ಅಧಿಕೃತವಾಗಿ ವೀರ ಸಾವರ್ಕರ್ ಹೆಸರಿಡಲು ಸರ್ಕಾರಕ್ಕೆ ಸಾವರ್ಕರ್ ಪ್ರತಿಷ್ಠಾನ, ಬಿಜೆಪಿ ಮಾಜಿ ಎಂಎಲ್ಸಿ ಜಿ.ಎಸ್. ನ್ಯಾಮಗೌಡ ಅವರು ಒತ್ತಾಯಿಸಿದ್ದಾರೆ.