ಧರ್ಮಕ್ಕೂ ಜಾತಿ ಮತಗಳಿಗೂ ಇರುವ ವ್ಯತ್ಯಾಸ ಗೊತ್ತಿಲ್ಲವೇ ಈ NRI ನಟನಿಗೆ
ಬೆಂಗಳೂರು: ಕನ್ನಡದ ಕಾಂತಾರ ಸಿನಿಮಾ ಯಶಸ್ವಿಯಾಗಿ ದೇಶಾದ್ಯಂತ ಥಿಯೇಟರ್‌ಗಳಲ್ಲಿ ಓಡುತ್ತಿದ್ದರೆ. ಇತ್ತ ಕನ್ನಡದ ಮತ್ತೊಬ್ಬ ನಟ ಚೇತನ್ ಸೃಷ್ಟಿಸಿದ ವಿವಾದಿತ ಅಸಂಬದ್ಧ ಹೇಳಿಕೆ ವಿವಾದ ಸೃಷ್ಟಿಸಿದೆ.
ಬೆಂಗಳೂರು: ಕನ್ನಡದ ಕಾಂತಾರ ಸಿನಿಮಾ ಯಶಸ್ವಿಯಾಗಿ ದೇಶಾದ್ಯಂತ ಥಿಯೇಟರ್‌ಗಳಲ್ಲಿ ಓಡುತ್ತಿದ್ದರೆ ಇತ್ತ ಕನ್ನಡದ ಮತ್ತೊಬ್ಬ ನಟ ಚೇತನ್ ಸೃಷ್ಟಿಸಿದ ವಿವಾದಿತ ಹೇಳಿಕೆ ವಿವಾದ ಸೃಷ್ಟಿಸಿದೆ. ಕಾಂತಾರ ಸಿನಿಮಾದಲ್ಲಿ ವೈದಿಕತೆಯನ್ನು ವೈಭವೀಕರಿಸಲಾಗಿದೆ. ಭೂತರಾಧಾನೆ ಹಿಂದೂ ಧರ್ಮದಲ್ಲಿಲ್ಲ ಅದು ಆದಿವಾಸಿ ಬುಡಕಟ್ಟು ಸಮುದಾಯದ ಆಚರಣೆ ಅದನ್ನು ಹಿಂದೂಗಳದ್ದು ಎಂದು ಹೇಳಲಾಗುತ್ತಿದೆ ಎಂಬ ವಾದ ಚೇತನ್‌ರದ್ದು, ತುಳುನಾಡಿನ ಕೊರಗ ಪಂಬದ ಮುಂತಾದ ಸಮುದಾಯಗಳು ಹಿಂದೂ ಧರ್ಮದ ಕೆಳಗೆ ಬರುವ ಒಂದೊಂದು ಜಾತಿಗಳು. ಎಲ್ಲಾ ಜಾತಿಗಳು ಜೊತೆಗೂಡಿಯೇ ಈ ದೈವರಾಧಾನೆಯನ್ನು ಮಾಡುವ ಸಂಪ್ರದಾಯ ತುಳುನಾಡಿನಲ್ಲಿದೆ. ಆದರೆ ಭೂತಾರಾಧನೆ ಮಾಡುವವರು ಹಿಂದೂಗಳಲ್ಲ ಆದಿವಾಸಿಗಳು ಇದು ಆದಿವಾಸಿಗಳ ಆಚರಣೆ. ಅದನ್ನು ಹಿಂದುಗಳದ್ದು ಎಂದು ಹೇಳಲಾಗುತ್ತಿದೆ ಎಂಬ ವಾದ ಚೇತನ್‌ರದ್ದು. ಆದರೆ ದೈವರಾಧನೆ ಮಾಡುವ ಇಲ್ಲಿನ ಬಹುತೇಕ ಸಮುದಾಯಗಳು, ದೈವ ಪಾತ್ರಿ ಅಥವಾ ದೈವ ನರ್ತಕರೆನಿಸಿರುವ ಪರವ ಪಂಬಂದ ಸಮುದಾಯಗಳೆಲ್ಲವೂ ಈ ಆರಾಧನೆಯ ಅವಿಭಾಜ್ಯ ಅಂಗ. ಹೀಗಿರುವಾಗ ಈ ನಟನ ಹೇಳಿಕೆಯ ಉದ್ದೇಶವೇನು? ಸ್ವತಃ ಓರ್ವ ನಟನಾಗಿ ಸಿನಿಮಾವನ್ನು ಸಿನಿಮಾವಾಗಿ ನೋಡುವ ಬದಲು ಸಮಾಜದ ಸ್ವಾಸ್ಥ್ಯ ಕೆಡಿಸುವ ಉದ್ದೇಶವೇಕೆ ಎಲ್ಲವನ್ನು ಬಲ್ಲವರಂತೆ ಮಾತನಾಡುವ ಈ ಎನ್‌ಆರ್‌ಐ ನಟನಿಗೆ ಧರ್ಮ, ಜಾತಿ, ಮತಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.