Asianet Suvarna News Asianet Suvarna News

Insult To Koragajja ಕೊರಗಜ್ಜನ ವೇಷ ಧರಿಸಿ ವರನ ಹುಚ್ಚಾಟ, ಕಾನೂನು ಕ್ರಮಕ್ಕೆ ಆಗ್ರಹ

ಕರಾವಳಿಯ ಜನ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಕೊರಗಜ್ಜ ದೈವಕ್ಕೆ ಅವಮಾನ ಎಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಎಂಬಲ್ಲಿ ನಡೆದಿದೆ. ಮದುವೆ ದಿನ ವರ- ವಧುವಿನ ಮನೆಯಲ್ಲಿ ಕೊರಗಜ್ಜ ದೈವದ ರೀತಿ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ್ದು, ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ, (ಜ.07): ಕರಾವಳಿಯ ಜನ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಕೊರಗಜ್ಜ ದೈವಕ್ಕೆ ಅವಮಾನ ಎಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಎಂಬಲ್ಲಿ ನಡೆದಿದೆ. ಮದುವೆ ದಿನ ವರ- ವಧುವಿನ ಮನೆಯಲ್ಲಿ ಕೊರಗಜ್ಜ ದೈವದ ರೀತಿ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ್ದು, ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Crime News: ಕೊರಗಜ್ಜ ಸೇರಿದಂತೆ ಮಂಗಳೂರಿನ ದೇಗುಲಗಳಲ್ಲಿ ಕಾಂಡೋಮ್ ಹಾಕಿದ್ದವ ಅರೆಸ್ಟ್

ಜನವರಿ 6ರ ಗುರುವಾರ ರಾತ್ರಿ‌ 10 ಗಂಟೆಗೆ ಘಟನೆ ನಡೆದಿದ್ದು, ಬಂಟ್ವಾಳದ ಕೊಳ್ನಾಡು ಗ್ರಾಮದ ಅಝೀಝ್ ಎಂಬುವವರ ಪುತ್ರಿಯ ಮಗಳ ವಿವಾಹ ಕೇರಳ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ನಡೆದಿತ್ತು. ಮದುವೆ ದಿನ ಮುಸ್ಲಿಂ ಸಂಪ್ರದಾಯದಂತೆ ವರ- ವಧುವಿನ ಮನೆಗೆ ಬರುವ ಸಂಪ್ರದಾಯವಿದ್ದು, ಈ ವೇಳೆ ವರ ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ವರನ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.

Video Top Stories