Belagavi: ಮೈನವಿರೇಳಿಸುವಂತಿದೆ ಭಾರತ-ಜಪಾನ್ ಯೋಧರ ಜಂಟಿ ಸಮರಾಭ್ಯಾಸ

*  ಬೆಳಗಾವಿಯಲ್ಲಿ ಭಾರತ-ಜಪಾನ್ ನಡುವೆ ಜಂಟಿ ಮಿಲಟರಿ ಅಭ್ಯಾಸ
*  ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಎರಡು ದೇಶದ ತಲಾ 40ಯೋಧರು ಭಾಗಿ
*  ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡುವ ತರಬೇತಿ 
 

First Published Mar 9, 2022, 1:15 PM IST | Last Updated Mar 9, 2022, 1:15 PM IST

ಬೆಳಗಾವಿ(ಮಾ.09): ಬೆಳಗಾವಿಯಲ್ಲಿರುವ ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ ಬರೀ ನಮ್ಮ ದೇಶದ ಯೋಧರು ಮಾತ್ರ ಇಲ್ಲ ಅವರೊಂದಿಗೆ ಜಪಾನ್‌ನ ಯೋಧರು ಕೂಡ ಭಾಗಿಯಾಗಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಫೆ.27ರಿಂದ ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿರುವ ಮರಾಠಾ ಲಘುಪದಾತಿ ದಳದಲ್ಲಿ ಈ ಜಂಟಿ ಸಮರಾಭ್ಯಾಸ ಶುರುವಾಗಿದ್ದು ಇಂದು ಫೀಲ್ಡ್‌ಗಿಳು‌ ಉಗ್ರರ ವಿರುದ್ಧದ ಕಾರ್ಯಾಚರಣೆಯ ತರಬೇತಿಯ ಅಣಕು ಪ್ರದರ್ಶನ ನಡೆಸಿದರು.

12 ದಿನಗಳ ಕಾಲ ನಡೆಯುವ ಈ ಸಮರಾಭ್ಯಾಸದಲ್ಲಿ 'ಧರ್ಮ ಗಾರ್ಡಿಯನ್ 2022' ಕಾರ್ಯಕ್ರಮದ ಹೆಸರಲ್ಲಿ ನಡೆಯುತ್ತಿದೆ. 1999ರಿಂದಲೂ ವಿವಿಧ ದೇಶಗಳ ಜತೆಗೆ ಈ ಸಮರಾಭ್ಯಾಸ ನಡೆಯುತ್ತಿದ್ದು ಈ ಬಾರಿ ಜಪಾನ್ ಜತೆಗೆ ಸಮರಾಭ್ಯಾಸ ನಡೆಯುತ್ತಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್ ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಮತ್ತು ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದಾರೆ. ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲಕರವಾಗಿರುವ ಈ ಸಮರಾಭ್ಯಾಸ. ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ, ಮನೆಗಳ ಮೇಲಿನ ಡ್ರಿಲ್‌ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ತರಬೇತಿ ಸೇರಿ ವಿವಿಧ ಹಂತದ ಕಾರ್ಯಾಚರಣೆಗಳನ್ನ ಇಲ್ಲಿ ನಡೆಸಲಾಗುತ್ತಿದೆ.

Chikkamagaluru: ಅಕ್ರಮವಾಗಿ ಬಿಪಿಎಲ್ ಕಾರ್ಡ್‌ ಪಡೆದ ಸರ್ಕಾರಿ ನೌಕರರು..!

ಇಂದು ನಡೆದ ಸಮರಾಭ್ಯಾಸದಲ್ಲಿ ಮೊದಲು ಎರಡು ದೇಶದ ಯೋಧರಿಗೆ ಉಗ್ರರ ಅಡಗು ತಾಣಗಳ ಮೇಲೆ ಹೇಗೆ ದಾಳಿಯನ್ನ ನಡೆಸಬೇಕು. ಯಾವ ರೀತಿಯಾಗಿ ಜಂಟಿ ಆಪರೇಷನ್ ಮಾಡಬೇಕು ಅದೆಲ್ಲವನ್ನೂ ಒಂದೂವರೆಗಳ ಕಾಲ ವಿವರಣೆ ಮಾಡಲಾಯಿತು. ಹೇಗೆಲ್ಲಾ ಪ್ಲ್ಯಾನ್ ಮಾಡಿಕೊಂಡು ಉಗ್ರರು ಅಡಗಿರುವ ತಾಣಗಳಿಗೆ ಹೋಗಬೇಕು ಅಲ್ಲಿ ಒಟ್ಟಾಗಿ ಕಾರ್ಯಚರಣೆ ನಡೆಸುವುದು ಹೇಗೆ ಮತ್ತು ಈ ವೇಳೆ ತಂತ್ರಜ್ಞಾನವನ್ನ ಬಳಕೆ ಮಾಡಿಕೊಳ್ಳುವುದು ಹೀಗೆ ಎಲ್ಲವನ್ನೂ ಮ್ಯಾಪ್ ಮುಖಾಂತರ ವಿವರಣೆ ಮಾಡಲಾಯಿತು. ಇದಾದ ಬಳಿಕ ನಾಲ್ಕು ಸೇನಾ ಹೆಲಿಕಾಪ್ಟರ್‌ಗಳಲ್ಲಿ ಆಗಮಿಸಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡುವ ತರಬೇತಿ ನಡೆಸಿದರು. ಹೆಲಿಕ್ಯಾಪ್ಟರ್ ನಲ್ಲಿ ಎರಡು ದೇಶದ ಯೋಧರು ಶಸ್ತ್ರ ಸಜ್ಜಿತರಾಗಿ ಹಗ್ಗದ ಮೂಲಕ ಕೆಳಗಿಳಿಯುವ ದೃಶ್ಯ ಮೈನವಿರೇಳಿಸುವಂತಿತ್ತು. ಇದಾದ ಬಳಿಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಹಿಡಿದುಕೊಂಡು ಯೋಧರು ತಾಲೀಮು ನಡೆಸಿದ್ದು ರೋಮಾಂಚನಕಾರಿಯಾಗಿತ್ತು. ಇನ್ನೂ ಭಾರತ ಜಪಾನ್ ಯೋಧರ ಜಂಟಿ ಸಮರಾಭ್ಯಾಸದಲ್ಲಿ ಬ್ರಿಗೇಡಿಯರ್ ಎನ್‌ ಎಸ್ ಸೋಹಾಲ್ ಕಮಾಂಡರ್ 115 ಬ್ರಿಗೇಡ್. ಮೇಜರ್ ಜನರಲ್ ಭವಿನೀಷ್ ಕುಮಾರ್ ಜನರಲ್ ಆಫೀಸರ್ ಕಮಾಂಡಿಂಗ್ 36 ಇನ್ಫೆಂಟ್ರಿ ಡಿವಿಜನ್ ಇವರ ಸಮ್ಮುಖದಲ್ಲಿ ನಡೆಯಿತು.
 

Video Top Stories