ಪದ್ಮನಾಭನಗರ ಸಂಭ್ರಮಕ್ಕೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್
ರಾಜಧಾನಿ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಕನ್ನಡಪ್ರಭ - ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಭಾಗಿತ್ವದಲ್ಲಿ ಭಾನುವಾರದವರೆಗೆ ನಡೆಯುವ ‘ಪದ್ಮನಾಭ ಸಂಭ್ರಮ’ ಕಾರ್ಯಕ್ರಮ ಅದ್ಧೂರಿ ಆರಂಭ ಪಡೆದುಕೊಂಡಿದೆ.
ರಾಜಧಾನಿ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಕನ್ನಡಪ್ರಭ - ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಭಾಗಿತ್ವದಲ್ಲಿ ಭಾನುವಾರದವರೆಗೆ ನಡೆಯುವ ‘ಪದ್ಮನಾಭ ಸಂಭ್ರಮ’ ಕಾರ್ಯಕ್ರಮ ಅದ್ಧೂರಿ ಆರಂಭ ಪಡೆದುಕೊಂಡಿದೆ. ಮೂರು ದಿನದ ಕಾರ್ಯಕ್ರಮಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನ ಅತಿದೊಡ್ಡ ಆಹಾರ, ಮನರಂಜನೆ ಮತ್ತು ಫ್ಯಾಷನ್ ಹಬ್ಬದ ದಿನವೇ ಆಹಾರ, ಶಾಪಿಂಗ್‌ಗೆ ಸುರಿವ ಮಳೆಯನ್ನು ಲೆಕ್ಕಿಸದೆ ಪದ್ಮನಾಭ ನಗರದ ಜನರು ಹೆಚ್ಚು ಉತ್ಸಾಹ ತೋರಿದ್ದಾರೆ. ಮನರಂಜನೆ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಿದ್ದಾರೆ. ಎಪ್ಪತ್ತಕ್ಕೂ ಹೆಚ್ಚು ಮಳಿಗೆಗಳಿದ್ದು ಖಾದ್ಯ, ಕರಿದ ತಿಂಡಿ, ಸಾವಯವ ಆಹಾರ ಪದಾರ್ಥ, ಆಯುರ್ವೇದ ಔಷಧ, ಇಲೆಕ್ಟ್ರಾನಿಕ್ ಉಪಕರಣಗಳು, ವಸ್ತ್ರದ ಅಂಗಡಿಗಳು ಹೀಗೆ ವಿವಿಧ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ವ್ಯಾಪಾರ ನಡೆಯುತ್ತಿದೆ.
ಪದ್ಮನಾಭ ನಗರ ಸಂಭ್ರಮದಲ್ಲಿ ಶುಕ್ರವಾರವಷ್ಟೇ ಬಿಡುಗಡೆಯಾದ ಶಿವ 143 ಚಿತ್ರ ತಂಡ ಪಾಲ್ಗೊಂಡಿತು. ಚಿತ್ರದ ನಾಯಕ ಧೀರೆನ್ ರಾಮ್ ಕುಮಾರ್, ನಾಯಕಿ ಮಾನ್ವಿತಾ ಕಾಮತ್, ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.