Chikkaballapur: ವೈರಲ್ ಫೀವರ್ ಹೊಡೆತಕ್ಕೆ ಥಂಡಾ ಹೊಡೆದ ಜನರು: ಆಸ್ಪತ್ರೆಯ ಒಪಿಡಿಗಳು ಫುಲ್ ರಶ್..!
* ವೈರಲ್ ಫೀವರ್ ಹೊಡೆತಕ್ಕೆ ಕಂಗಾಲಾಗಿ ಹೋದ ಜನರು
* ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ
* ಕೊರೋನಾ 3ನೇ ಅಲೆಯಿಂದಾಗಿ ಆಸ್ಪತ್ರೆಗಳ ವೈದ್ಯರು ಫುಲ್ ಅಲರ್ಟ್
ಚಿಕ್ಕಬಳ್ಳಾಪುರ(ಜ.19): ವೈರಲ್ ಫೀವರ್ ಹೊಡೆತಕ್ಕೆ ಜನರು ಕಂಗಾಲಾಗಿ ಹೋಗಿದ್ದಾರೆ. ಹೌದು, ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಜ್ವರ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗುತ್ತಿದೆ. ಚಿಕ್ಕಬಳ್ಳಾಪುರ ನಗರದ ಆಸ್ಪತ್ರೆಗಳ ಒಪಿಡಿ ರೋಗಿಗಳಿಂದ ತುಂಬಿತುಳುಕುತ್ತಿವೆ. ಪ್ರತಿದಿನ 700 ರಿಂದ 900 ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ ಅಂತ ತಿಳಿದು ಬಂದಿದೆ. ಜಿಲ್ಲೆಯ ಜನ ಕೆಮ್ಮು, ನೆಗಡಿ, ಮೈಕೈ ನೋವಿನಿಂದ ಬಳಲುತ್ತಿದ್ದಾರೆ. ಪ್ರತಿ ದಿನ 150 ರಿಂದ 200 ಮಕ್ಕಳು ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದಾರೆ. ಕೊರೋನಾ ಮೂರನೇ ಅಲೆಯಿಂದಾಗಿ ಆಸ್ಪತ್ರೆಗಳ ವೈದ್ಯರು ಫುಲ್ ಅಲರ್ಟ್ ಆಗಿದ್ದಾರೆ. ಇದು ವೈರಲ್ ಫೀವರಾ?ಅಥವಾ ಕೊರೋನಾನೇನಾ ಅಂತ ಜನರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಜನರು ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ.
Covid 19 Karnataka: ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.22.30ಕ್ಕೆ ಏರಿಕೆ: 41 ಸಾವಿರ ಹೊಸ ಕೇಸ್!