ಲವ್‌ ಜಿಹಾದ್‌ ತಡೆಗಟ್ಟಲು ಕುಟುಂಬಗಳನ್ನೇ ಬಹಿಷ್ಕರಿಸಿ, ಹುಡಾ ಅಧ್ಯಕ್ಷರಿಂದ ವಿವಾದದ ಕಿಡಿ

ಲವ್‌ ಜಿಹಾದ್‌ನಲ್ಲಿ ಸಿಲುಕುವ ಯುವತಿಯರ ಕುಟುಂಬಗಳನ್ನು ‘ಸಮಾಜದಿಂದ ಬಹಿಷ್ಕರಿಸಿ’ಎಂದು ಎಸ್‌ಎಸ್‌ಕೆ ಸಮಾಜದ ಮುಖಂಡರೂ ಆಗಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಒತ್ತಾಯಿಸಿ ಪತ್ರ ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ.

First Published Apr 9, 2022, 1:22 PM IST | Last Updated Apr 9, 2022, 1:22 PM IST

ಹುಬ್ಬಳ್ಳಿ (ಏ. 09):  ಲವ್‌ ಜಿಹಾದ್‌ನಲ್ಲಿ ಸಿಲುಕುವ ಯುವತಿಯರ ಕುಟುಂಬಗಳನ್ನು ‘ಸಮಾಜದಿಂದ ಬಹಿಷ್ಕರಿಸಿ’ಎಂದು ಎಸ್‌ಎಸ್‌ಕೆ ಸಮಾಜದ ಮುಖಂಡರೂ ಆಗಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಒತ್ತಾಯಿಸಿ ಪತ್ರ ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ.

ಹುಡಾದ ಲೆಟರ್‌ ಹೆಡ್‌ನಲ್ಲಿ ‘ಎಸ್‌ಎಸ್‌ಕೆ ಸಮಾಜದ ಪಂಚಟ್ರಸ್ಟ್‌ ಕಮಿಟಿ, ಮುಖ್ಯಧರ್ಮದರ್ಶಿಗಳಿಗೆ’ ಪತ್ರ ಬರೆದಿರುವುದಕ್ಕೆ ಮತ್ತು ಸಾಮಾಜಿಕ ಬಹಿಷ್ಕಾರ ಹಾಕುವ ಕಾನೂನು ವಿರೋಧಿ ಚಟುವಟಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

 ಈ ಬಗ್ಗೆ ಸ್ಪಷ್ಟನೆ ನೀಡಿರುವ ನಾಗೇಶ್‌, ನಾನು ಸಮಾಜದ ಧರ್ಮದರ್ಶಿಗಳಿಗೆ, ಟ್ರಸ್ಟ್‌ ಕಮಿಟಿ ಸದಸ್ಯರಿಗೆ ಪತ್ರ ಬರೆದಿರುವುದು ನಿಜ. ಇತ್ತೀಚಿಗೆ ಲವ್‌ ಜಿಹಾದ್‌ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದನ್ನು ತಡೆಗಟ್ಟಬೇಕು. ನಮ್ಮ ಸಮಾಜದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಬೇಕೆಂದರೆ ಕಠಿಣ ಕ್ರಮ ಅಗತ್ಯ. ಸಮಾಜದಿಂದ ದೂರವಿಡುತ್ತೇವೆ ಎಂದರೆ ಯುವತಿಯರು ಯೋಚನೆ ಮಾಡುತ್ತಾರೆ. ಲವ್‌ ಜಿಹಾದ್‌ ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.

Video Top Stories