ಹಿರಿಯೂರು ನಗರಸಭೆ ಕಟ್ಟಡ ಉದ್ಘಾಟನೆಗೆ 'ಪೊಲಿಟಿಕಲ್ ಕ್ರೆಡಿಟ್ ವಾರ್'
ಹಿರಿಯೂರು ಪಟ್ಟಣದ ನಗರಸಭೆಯ ನೂತನ ಕಟ್ಟಡವು ಅಧಿಕಾರದ ಹಗ್ಗ ಜಗ್ಗಾಟದಲ್ಲಿ ಉದ್ಘಾಟನೆಯ ಭಾಗ್ಯ ಕಂಡಿಲ್ಲ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ನಗರಸಭೆಯ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿದೆ. ಆದರೆ ಅಲ್ಲಿಯ ಸ್ಥಳೀಯ ಶಾಸಕರು ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್. ಹೀಗಾಗಿ ಅಧಿಕಾರದ ಹಗ್ಗ ಜಗ್ಗಾಟದಿಂದ ನೂತನ ಕಟ್ಟಡ ಉದ್ಘಾಟನೆಯಾಗದೆ ಅನಾಥವಾಗಿದೆ. ಇನ್ನು ಈ ನೂತನ ನಗರಸಭೆ ಕಟ್ಟಡಕ್ಕೆ ಹಿರಿಯೂರು ಮಾಜಿ ಶಾಸಕ ಡಿ. ಸುಧಾಕರ್ ಅವಧಿಯಲ್ಲಿ 3.5 ಕೋಟಿ ರೂ. ವೆಚ್ಚ ಮಂಜೂರಾಗಿದೆ. ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರೇ ಖುದ್ದು ಬಂದು ಶಂಕುಸ್ಥಾಪನೆ ಕೂಡ ನೆರವೇರಿಸಿದ್ದರು ಎನ್ನಲಾಗ್ತಿದೆ. ಬಳಿಕ ಮಂದಗತಿಯಲ್ಲಿ ಕೆಲಸ ಶುರುವಾಗಿದ್ದು ಕಳೆದ ಒಂದು ವರ್ಷದ ಹಿಂದೆ ಕಂಪ್ಲೀಟ್ ಕೆಲಸ ಮುಗಿದಿದೆ. ಆದ್ರೆ ಉದ್ಘಾಟನೆ ಮಾಡೋದಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರೇ ಹಿಂದೇಟು ಹಾಕ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್'ನವರಿಗೆ ಈ ಕ್ರೆಡಿಕ್ ಹೋಗುತ್ತದೆಯೋ ಎನ್ನುವ ಕಾರಣಕ್ಕೆ ಈ ರೀತಿ ಮಾಡ್ತಿದ್ದಾರಂತೆ. ಕೂಡಲೇ ಉದ್ಘಾಟನೆ ಮಾಡಿ, ಆದಷ್ಟು ಬೇಗ ನಮಗೆ ಅನುಕೂಲ ಮಾಡಿಕೊಡಿ ಅಂತಿದ್ದಾರೆ ಇಲ್ಲಿನ ಸ್ಥಳೀಯರು.
ಗುಜರಾತ್ ಚುನಾವಣೆ ಭವಿಷ್ಯ ನುಡಿದ ರಾಹುಲ್ ಗಾಂಧಿ, ಆಪ್‌ಗೆ ತಳಮಳ, ಬಿಜೆಪಿಗೆ ಕಸಿವಿಸಿ!