Hijab Row Kodagu: ಜೂನಿಯರ್ ಕಾಲೇಜಿನ 5 ವಿದ್ಯಾರ್ಥಿನಿಯರಿಂದ ಮೌನ ಪ್ರತಿಭಟನೆ!
*ಕಾಲೇಜುಗಳಲ್ಲಿ ಮುಂದುವರೆದ ಹಿಜಾಬ್ ಗದ್ದಲ
*ಕೊಡಗು ಜೂನಿಯರ್ ಕಾಲೇಜಿನಲ್ಲಿ ಮೌನ ಪ್ರತಿಭಟನೆ
*ಸೋಮವಾರದಿಂದ ಪಿಯುಸಿ ಪ್ರ್ಯಾಕ್ಟಿಕಲ್ ಪರೀಕ್ಷೆ
*ಹಿಜಾಬ್ ಬಿಡಲ್ಲ ಎಂದ ವಿದ್ಯಾರ್ಥಿನಿಯರು
ಕೊಡಗು (ಫೆ. 19): ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧಾರಣೆ (Hijab Row) ನಿರ್ಬಂಧ ಕುರಿತ ಆದೇಶ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಹೈಕೋರ್ಟ್‌ನ (High Court) ವಿಸ್ತೃತ ಪೀಠದ ನಡೆಸುತ್ತಿದೆ. ನ್ಯಾಯಾಲಯದ ಮಧ್ಯಂತರ ಆದೇಶದ ಬಳಿಕ ಶಾಲಾ-ಕಾಲೇಜುಗಳು ಹಿಜಾಬ್‌ಗೆ ಅನುಮತಿಸುತ್ತಿಲ್ಲ. ಈ ಬೆನ್ನಲ್ಲೇ ಕೊಡಗಿನ ಜೂನಿಯರ್ ಕಾಲೇಜು (Junior College) ಮುಂದೆ 5 ವಿದ್ಯಾರ್ಥಿನಿಯರು ಮೌನ ಪ್ರತಭಟನೆ ನಡೆಸಿದ್ದಾರೆ. ಸೋಮವಾರದಿಂದ ಪಿಯುಸಿ ಪ್ರ್ಯಾಕ್ಟಿಕಲ್ ಪರೀಕ್ಷೆಗಳು ನಡೆಯಲಿದ್ದು ಹಿಜಾಬ್ ಹಾಕಿಯೇ ಪರೀಕ್ಷೆ ಬರೆಯುತ್ತೇವೆ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದ್ದಾರೆ. ಇನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ಕಾಲೇಜು ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: Raichur Students: ಹಿಂದೂ-ಮುಸ್ಲಿಂ ಒಟ್ಟಾಗಿದ್ದೇವೆ, ಡ್ರೆಸ್ ಕೋಡ್ ಪಾಲಿಸಿದ ರಾಯಚೂರು ವಿದ್ಯಾರ್ಥಿನಿಯರು
ಇನ್ನು ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ ಗದ್ದಲ ಮುಂದುವರಿದಿದ್ದು, ಕಗ್ಗಂಟಾಗಿ ಪರಿಣಮಿಸಿದೆ. ರಾಜ್ಯದ ಕೆಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಯತ್ನಿಸಿದ, ಅದಕ್ಕೆ ಕಾಲೇಜು ಸಿಬ್ಬಂದಿ ತಡೆಯೊಡ್ಡಿದ ಘಟನೆಗಳು ನಡೆದಿವೆ. ಈ ವೇಳೆ, ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂದು ವಿದ್ಯಾರ್ಥಿನಿಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.