ಶೃಂಗೇರಿ: ಭಾರೀ ಮಳೆಗೆ ನೇರಳೆಕೊಡಿಗೆ ಬಳಿ ಕೊಚ್ಚಿ ಹೋದ ರಸ್ತೆ

ಶೃಂಗೇರಿ ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ನೆಮ್ಮಾರು ಸಮೀಪದಲ್ಲಿ ತುಂಗಾನದಿ ನೀರು ರಸ್ತೆಗೆ ನುಗ್ಗಿತ್ತು

First Published Jul 17, 2022, 1:25 PM IST | Last Updated Jul 17, 2022, 1:25 PM IST

ಶೃಂಗೇರಿ (ಜು. 17):  ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ನೆಮ್ಮಾರು ಸಮೀಪದಲ್ಲಿ ತುಂಗಾನದಿ ನೀರು ರಸ್ತೆಗೆ ನುಗ್ಗಿತ್ತು.  ಶೃಂಗೇರಿ ಪಟ್ಟಣದ ಶ್ರೀಮಠ ಭಾರತೀ ಬೀದಿ ಹಾಗೂ ಕುರುಬಗೇರಿ ಸಂಪರ್ಕ ಕಲ್ಪಿಸುವ ಬೇಪಾಸ್‌ ರಸ್ತೆಯ ಮೇಲೆ ಪ್ರವಾಹ ಉಂಟಾಗಿತ್ತು. ಇದರಿಂದ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಶ್ರೀ ಮಠದ ತುಂಗಾನದಿ ತೀರದಲ್ಲಿರುವ ಕಪ್ಪೆ ಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ.

ನೇರಲೇಕೊಡಿಗೆ ಬಳಿ 100 ಅಡಿ ರಸ್ತೆ ಕೊಚ್ಚಿ ಹೋಗಿದೆ. ಶೃಂಗೇರಿ- ಆಗುಂಬೆ ಮಾರ್ಗದ ರಸ್ತೆ ಸಂಪೂರ್ಣ ಕಡಿತವಾಗಿದೆ. ಹರಿಹರಪುರ ಮಾರ್ಗವಾಗಿ ಜನ ಪ್ರಯಾಣಿಸ್ತಾ ಇದ್ದಾರೆ.