Asianet Suvarna News Asianet Suvarna News

ಹಾವೇರಿ: ಸುಡುಗಾಡು ಸಿದ್ದ ಅಲೆಮಾರಿಗಳ ಕಷ್ಟಕ್ಕೆ ಮಿಡಿದ ಸೋನು ಸೂದ್, ನೆರವಿನ ಭರವಸೆ

ಶಾಶ್ವತ ಸೂರಿನ ನೆರವು ಯಾಚಿಸಿ ಬಡ ಸುಡುಗಾಡ ಸಿದ್ದರು ಮುಂಬೈಗೆ ತೆರಳಿ ಸೋನು ಸೂದ್‌ರನ್ನು ಭೇಟಿಯಾಗಿದ್ಧಾರೆ. ಯುವಕರ ಬೇಡಿಕೆಗೆ ಸೋನು ಸೂದ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 

ಹಾವೇರಿ (ಜು.18): ಶಾಶ್ವತ ಸೂರಿನ ನೆರವು ಯಾಚಿಸಿ ಬಡ ಸುಡುಗಾಡ ಸಿದ್ದರು ಮುಂಬೈಗೆ ತೆರಳಿ ಸೋನು ಸೂದ್‌ರನ್ನು ಭೇಟಿಯಾಗಿದ್ಧಾರೆ. ಯುವಕರ ಬೇಡಿಕೆಗೆ ಸೋನು ಸೂದ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲೆಮಾರಿಗಳ ವಿದ್ಯಾಭ್ಯಾಸ, ಆಹಾರ ಧಾನ್ಯ ಮತ್ತಿತರ ನೆರವಿನ ಭರವಸೆ ನೀಡಿದ್ಧಾರೆ. 

ಸುಡುಗಾಡು ಸಿದ್ಧರ ಅಲೆಮಾರಿ ಜನಾಂಗ ಸ್ವಂತ ಸೂರುಗಳಿಲ್ಲದೇ, ನಗರಸಭೆ ನಿವೇಶನಗಳಲ್ಲಿ 45 ಕ್ಕೂ ಹೆಚ್ಚು ಕುಟುಂಬಗಳು ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ಧಾರೆ. ಮಳೆ, ಗಾಳಿ ಜೋರಾದಾಗ ಟೆಂಟ್ ಹಾರಿ ಹೋಗಿ ಪರದಾಡುವಂತಾಗುತ್ತದೆ. ಹಾಗಾಗಿ ನಮಗೊಂದು ಸೂರು ಕಲ್ಪಿಸಿಕೊಡಿ ಎಂದು ಸುಡುಗಾಡು ಸಿದ್ದ ಯುವಕರು ಸೋನು ಸೂದ್‌ಗೆ ಮನವಿ ಮಾಡಿದ್ಧಾರೆ.

Video Top Stories