Asianet Suvarna News Asianet Suvarna News

ಹಾಸನ: ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಮುಡಿಗೇರಿಸಿಕೊಂಡ 18 ತಿಂಗಳ ಪುಟ್ಟ ಕಂದ

ಕೇವಲ 18 ತಿಂಗಳ ಗವ್ಯಜಿಮೂರ್ತಿ ಎನ್ನುವ ಈ ಪುಟ್ಟ ಕಂದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.

ಹಾಸನ, [ಫೆ.19]:  ಕೇವಲ 18 ತಿಂಗಳ ಗವ್ಯಜಿಮೂರ್ತಿ ಎನ್ನುವ ಈ ಪುಟ್ಟ ಕಂದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.

ಅರೇ ಇದೇನಿದು 18 ತಿಂಗಳ ಬಾಲಕಿ ಈ ಸಾಧನೆ ಮಾಡಲು ಸಾಧ್ಯ ನಾ ಎಂದು ಅಚ್ಚರಿಯಾಗುತ್ತೆ ಅಲ್ವಾ. ಅಚ್ಚರಿ ಎನಿಸಿದರೂ ಇದು ಸತ್ಯ. ಹಾಸನ ಮೂಲದ ಗುರುಮೂರ್ತಿ ಮತ್ತು ಹೇಮಾ ದಂಪತಿಗಳ ಮಗಳಾದ ಗವ್ಯಜಿಮೂರ್ತಿ ಈ ಸಾಧನೆ ಮಾಡಿದ್ದಾಳೆ.

 18 ತಿಂಗಳದ ಈ ಬಾಲಕಿ, ಪ್ರಾಣಿ, ಪಕ್ಷಿಗಳು, ಪ್ರಸಿದ್ಧ ವ್ಯಕ್ತಿಗಳು ಮತ್ತಿರತ ವಸ್ತುಗಳನ್ನು ಸುಲಭವಾಗಿ ಗುರುತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ಪುಟ್ಟ ಪೋರಿ ಈ ಟ್ಯಾಲೆಂಟ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಸಂದಿರುವುದು ನಿಜಕ್ಕೂ ಸಂತಸದ ಸಂಗತಿ. ಈ ಪುಟ್ಟ ಪೋರಿಗೊಂದು ಸೆಲ್ಯೂಟ್.

ಕೆಸರು ಗದ್ದೆಯಲ್ಲಿ ಓಡಿದ ಕಂಬಳ ವೀರ ವಿಧಾನಸೌಧದಲ್ಲಿ ಮಿಂಚಿಂಗ್

Video Top Stories