ಎಲ್ಲೆಲ್ಲೂ ಕೊರೋನಾದ್ದೇ ಕಾಟ: ಬೈಕ್ ಮೇಲೆ ಧ್ವನಿ ವರ್ಧಕದ ಮೂಲಕ ಜಾಗೃತಿ

ಕೊರೋನಾ ವೈರಸ್‌ ಭೀತಿ| ಧ್ವನಿವರ್ಧಕ ಮೂಲಕ ಸೂಚನೆ ನೀಡುತ್ತಿರುವ ಗ್ರಾಮ ಪಂಚಾಯತ್ ಸಿಬ್ಬಂದಿ| ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಲಗೇರಿ ಎಲ್ ಟಿ 1(ತಾಂಡಾ) ಗ್ರಾಮ ಪಂಚಾಯತ್‌ ಸಿಬ್ಬಂದಿಯಿಂದ ಜಾಗೃತಿ| 

First Published Mar 16, 2020, 3:27 PM IST | Last Updated Mar 16, 2020, 3:27 PM IST

ಬಾಗಲಕೋಟೆ(ಮಾ.16): ರಾಜ್ಯದಲ್ಲಿ ಕೊರೋನಾ ವೈರಸ್‌ ಕಾಟ ಹೆಚ್ಚಾದ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಲಗೇರಿ ಎಲ್ ಟಿ 1(ತಾಂಡಾ) ಗ್ರಾಮ ಪಂಚಾಯತ್‌ ಸಿಬ್ಬಂದಿ ಬೈಕ್ ಮೇಲೆ ಧ್ವನಿ ವರ್ಧಕದ ಮೂಲಕ ಗ್ರಾಮದಲ್ಲಿ ಮಾಹಿತಿ ನೀಡುತ್ತಿದ್ದಾರೆ. 

ರಾಜ್ಯದಲ್ಲಿ ಮತ್ತೊಂದು ಕೊರೋನಾ ಸೋಂಕು ಪತ್ತೆ: ಸಚಿವ ಸುಧಾಕರ್ ನೇತೃತ್ವದಲ್ಲಿ ತುರ್ತು ಸಭೆ

ಒಂದು ವಾರ ಮದುವೆ, ಸಭೆ, ಸಮಾರಂಭ ನಿಷೇಧ ಜೊತೆಗೆ ಗ್ರಾಮ ಹಾಗೂ ಮನೆಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಗ್ರಾಮ ಪಂಚಾಯತ್‌ ಸಿಬ್ಬಂದಿ ಬೈಕ್ ಮೇಲೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. 
 

Video Top Stories