ಲಕ್ಷ್ಮೀ ಹೆಬ್ಬಾಳ್ಕರ್‌ರನ್ನ ಗೆಲ್ಲಿಸಿದ್ದೇ ತಪ್ಪಾಯ್ತು ಎಂದ ರಮೇಶ್ ಜಾರಕಿಹೊಳಿ

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಘರ್ಜಿಸಿದ ರಮೇಶ್ ಜಾರಕಿಹೊಳಿ| ಆ ಶಾಸಕರನ್ನ ಗೆಲ್ಲಿಸಿದ್ದು ನನ್ನ ತಪ್ಪು| ಮರಾಠಿಗರನ್ನ ಕೂಡಿಸಿ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನ ಗೆಲ್ಲಿಸಿದ್ದು ನಾನು ಮಾಡಿದ ತಪ್ಪು| ಒಳ್ಳೆ ಸಂಸ್ಕೃತಿಯ ಕಿತ್ತೂರು ಚೆನ್ನಮ್ಮ ನಾಡಿನ ಹೆಣ್ಣುಮಗಳು ಅಂತಾ ಗೆಲ್ಲಿಸಿದ್ದೆ|

First Published Dec 30, 2019, 10:48 AM IST | Last Updated Dec 30, 2019, 10:48 AM IST

ಬೆಳಗಾವಿ(ಡಿ.30): ಗೋಕಾಕ್ ಕ್ಷೇತ್ರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ವಾರ್ ಮತ್ತೆ ಜೋರಾಗಿದೆ. ಲಕ್ಷ್ಮೀ ನಮ್ಮ ವಿರುದ್ಧ ಮಾತೋಡದನ್ನ ನಿಲ್ಲಿಸುತ್ತೇವೆ. ಇವರನ್ನ ಚುನಾವಣೆಯಲ್ಲಿ ಗೆಲ್ಲಿಸಿದ್ದು ನನ್ನ ತಪ್ಪಾಗಿದೆ, ಮರಾಠಿಗರನ್ನ ಕೂಡಿಸಿ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನ ಗೆಲ್ಲಿಸಿದ್ದು ನಾನು ಮಾಡಿದ ತಪ್ಪು ಎಂದು ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ. 

ಒಳ್ಳೆ ಸಂಸ್ಕೃತಿಯ ಕಿತ್ತೂರು ಚೆನ್ನಮ್ಮ ನಾಡಿನ ಹೆಣ್ಣುಮಗಳು ಅಂತಾ ಗೆಲ್ಲಿಸಿದ್ದೆ, ಬೆಳಗಾವಿ ಗ್ರಾಮೀಣ ಮರಾಠಿಗರ ಸ್ವತ್ತು ಎಂದು ಹೇಳಿದ್ದಾರೆ. ನಾನು ಬೇಕಾದ್ರೆ ನಿಮಗೆ ಕುಕ್ಕರ್ ಕೊಡಿಸುತ್ತೇನೆ, ಬಿಜೆಪಿಯನ್ನ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸಾಹುಕಾರ್ ಘರ್ಜಿಸಿದ್ದಾರೆ.