Asianet Suvarna News Asianet Suvarna News

ಮಡಿಕೇರಿ: ನೋಡಬನ್ನಿ ನಮ್ಮ ನವಿಲು ಗಣಪನನ್ನು..!

Sep 13, 2021, 4:24 PM IST

ಮಡಿಕೇರಿ (ಸೆ. 13): ಪ್ರತಿ ಬಾರಿಯಂತೆ ವಿಶೇಷ ಮತ್ತು ವಿಭಿನ್ನ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಗಮನಸೆಳೆಯುವ ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘ ಈ ಬಾರಿ ಕೂಡಾ ಡಿಫರೆಂಟ್ ಮೂರ್ತಿ ಪ್ರತಿಷ್ಠಾಪಿಸಿದೆ. ನವಿಲು ವಾಹನ ಗಣಪತಿ ಈ ಸಲದ ವಿಶೇಷ. ಮಡಿಕೇರಿಯ ಕಲಾವಿದ ರವಿ ಎಂಬವರು ಮೂರ್ತಿ ನಿರ್ಮಾಣ ಮಾಡಿದ್ದು, ಎಂಟು ಅಡಿ ಎತ್ತರವಿದೆ. ಐದು ದಿನ ಕಾಲ ಪೂಜಾ ಕಾರ್ಯ ನಡೆದು, ಇಂದು ವಿಸರ್ಜನೆ ಮಾಡಲಾಗುತ್ತಿದೆ. ಆಕರ್ಷಕ ಗಣೇಶನ ಮೂರ್ತಿ ನೋಡೋದಕ್ಕೆ ಜನ ಕುತೂಹಲದಿಂದ ಆಗಮಿಸ್ತಾ ಇದ್ದಾರೆ.