ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಕೊಡದ ಜನ:ಲಾಕ್‌ಡೌನ್‌ ಉಲ್ಲಂಘಿಸಿ ಜಾತ್ರೆ, ಲಾಠಿ ಮೂಲಕ ಪ್ರಸಾದ..!

ಕೊರೋನಾ ಪಾಸಿಟಿವ್ ಪ್ರಕರಣಗಳಿಂದ ಬುದ್ಧಿ ಕಲಿಯದ ಜನ| ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದಲ್ಲಿ ರಥೋತ್ಸವ| ಪೊಲೀಸರಿಂದ ಲಾಠಿ ಚಾರ್ಚ್|

First Published Apr 22, 2020, 11:35 AM IST | Last Updated Apr 22, 2020, 11:35 AM IST

ಗದಗ(ಏ.22): ಜಿಲ್ಲೆಯಲ್ಲಿ ಈಗಾಗಲೇ 4 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆದರೂ ಜನರಿಗೆ ಮಾತ್ರ ಬುದ್ಧಿ ಬಂದಿಲ್ಲ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದಲ್ಲಿ ಊರ ದೇವತೆಗೆ ಮುಡಿ ತುಂಬುವ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ನಿಯಮವನ್ನು ಉಲ್ಲಂಘಿಸಿ ಸಾಕಷ್ಟು ಜನರು ಒಂದಾಗಿದ್ದಾರೆ. 

ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ

ಗಮನಕ್ಕೆ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ, ಜನರನ್ನು ಲಾಠಿ ಚಾರ್ಜ್ ಮೂಲಕ ಚದುರಿಸುವಲ್ಲಿ ಸಫಲಲಾಗಿದ್ದಾರೆ. ಹೀಗಾದರೆ ರೋಗ ನಿಯಂತ್ರಣಕ್ಕೆ ಬರೋದು ಹೇಗೆ? ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ. 
 

Video Top Stories