ಹುನಗುಂದ: ಶಾಸಕ ದೊಡ್ಡನಗೌಡ ಪಾಟೀಲಗೆ ಗಂಡಸ್ತನದ ಸವಾಲ್ ಹಾಕಿದ ಕಾಶಪ್ಪನವರ!
ಹುನಗುಂದ ಮತಕ್ಷೇತ್ರದ ದೊಡ್ಡನಗೌಡ ಪಾಟೀಲ, ವಿಜಯಾನಂದ ಕಾಶಪ್ಪನವರ ಟಾಕ್ ವಾರ್| ಪೌರತ್ವ ಕಾಯ್ದೆಯ ಪರವಾಗಿ ನೀನು ಮಾತಾಡ್ತಿಯಾ, ನಿನಗೆ ಗಂಡಸ್ತನ ಇದ್ದರೆ ಜನ ಸೇರಿಸು ನೋಡೇ ಬಿಡೋಣ|ನಾನೊಬ್ಬ ವೀರಶೈವ ಧರ್ಮದವನಾಗಿದ್ದೇನೆ| ನಾನು ಹಿಂದೂ ಅಂತ ಹೇಳೋದಿಲ್ಲ|
ಬಾಗಲಕೋಟೆ(ಫೆ.22): ಜಿಲ್ಲೆಯ ಹುನಗುಂದ ಮತಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಟಾಕ್ ವಾರ್ ಜೋರಾಗಿ ನಡೆದಿದೆ. ಪೌರತ್ವ ಕಾಯ್ದೆಯ ಪರವಾಗಿ ನೀನು ಮಾತಾಡ್ತಿಯಾ, ನಿನಗೆ ಗಂಡಸ್ತನ ಇದ್ದರೆ ಜನ ಸೇರಿಸು ನೋಡೇ ಬಿಡೋಣ ಎಂದು ದೊಡ್ಡನಗೌಡ ಪಾಟೀಲ ವಿರುದ್ಧ ಕಾಶಪ್ಪನವರ್ ಹರಿಹಾಯ್ದಿದ್ದಾರೆ.
ನಾನೊಬ್ಬ ವೀರಶೈವ ಧರ್ಮದವನಾಗಿದ್ದೇನೆ. ನಾನು ಹಿಂದೂ ಅಂತ ಹೇಳೋದಿಲ್ಲ. ಯಾಕೆಂದರೆ ನಾನು ಹಿಂದೂ ಅಲ್ಲ. ನನ್ನದೇಯಾದ ಧರ್ಮ ಇದೆ. ನಾನು ವೀರಶೈವ ಧರ್ಮದಿಂದ ಸಿಎಎ,ಎನ್‌ಆರ್‌ಸಿ ಕಾನೂನನ್ನು ವಿರೋಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.